ADVERTISEMENT

ಕಾಮನ್‌ವೆಲ್ತ್ ಶೂಟಿಂಗ್: ಕನ್ನಡಿಗನಿಗೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2014, 11:50 IST
Last Updated 26 ಜುಲೈ 2014, 11:50 IST
ಶುಕ್ರವಾರ 10 ಮೀ ಏರ್‌ ರೈಫಲ್‌ ವಿಭಾಗದಲ್ಲಿ ಬಂಗಾರ ಗೆದ್ದ ಅಭಿನವ್‌ ಬಿಂದ್ರಾ
ಶುಕ್ರವಾರ 10 ಮೀ ಏರ್‌ ರೈಫಲ್‌ ವಿಭಾಗದಲ್ಲಿ ಬಂಗಾರ ಗೆದ್ದ ಅಭಿನವ್‌ ಬಿಂದ್ರಾ   

ಗ್ಲಾಸ್ಗೊ (ಐಎಎನ್‌ಎಸ್‌/ಪಿಟಿಐ): ಕರ್ನಾಟಕದ ಶೂಟರ್ ಪಿ.ಎನ್.ಪ್ರಕಾಶ್ ಅವರು ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ 20ನೇ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮೂರನೇ ದಿನವಾದ ಶನಿವಾರ ಪುರುಷರ 10 ಮೀಟರ್ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಬೆಳ್ಳಿ ಸಾಧನೆ ತೋರಿದ್ದಾರೆ. ಈ ಮೂಲಕ ಪದಕಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಇಲ್ಲಿನ ಬ್ಯಾರಿ ಬುಡನ್ ಶೂಟಿಂಗ್ ಕೇಂದ್ರದಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಬೆಂಗಳೂರಿನ ಅಥ್ಲೀಟ್ ಪ್ರಕಾಶ್ ಅವರಿಂದ ಬೆಳ್ಳಿ ಸಾಧನೆ ಮೂಡಿ ಬಂತು.

ಇದಕ್ಕೂ ಮೊದಲು ನಡೆದ ಅರ್ಹತಾ ಸುತ್ತಿನಲ್ಲಿ ಪ್ರಕಾಶ್ ಅವರು 580 ಪಾಯಿಂಟ್‌ ಕಲೆ ಹಾಕಿ ಅಗ್ರಸ್ಥಾನ ಪಡೆಯುವ ಮೂಲಕ ಪದಕದ ಭರವಸೆ ಮೂಡಿಸಿದ್ದರು.

ADVERTISEMENT

ಅರ್ಹತಾ ಸುತ್ತಿನಲ್ಲಿ ಅವರು ಸರಣಿಯಾಗಿ 97, 96, 95, 99, 97, 96  ಪಾಯಿಂಟ್‌ಗಳನ್ನು ಕಲೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.