ADVERTISEMENT

ಕುಸ್ತಿ: ಭಾರತಕ್ಕೆ ಮತ್ತೆ ನಾಲ್ಕು ಚಿನ್ನ

​ಪ್ರಜಾವಾಣಿ ವಾರ್ತೆ
Published 1 ಜೂನ್ 2015, 19:30 IST
Last Updated 1 ಜೂನ್ 2015, 19:30 IST

ನವದೆಹಲಿ (ಪಿಟಿಐ):  ಭಾರತದ ಕುಸ್ತಿಪಟುಗಳು ಇಟಲಿಯ ಸಸ್ಸಾರಿ ಸಿಟಿಯಲ್ಲಿ ನಡೆಯುತ್ತಿರುವ ಅಂತರ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಮತ್ತೆ ನಾಲ್ಕು ಚಿನ್ನ ಗೆದ್ದಿದ್ದಾರೆ.

ಸೋಮವಾರ ನಡೆದ ಪುರುಷರ ವಿಭಾಗದ ಸ್ಪರ್ಧೆಗಳಲ್ಲಿ ಭಾರತದ  ಸೋನು (61ಕೆಜಿ), ಸೋಮವೀರ್ (86ಕೆಜಿ), ಮೌಸಮ್ ಖತ್ರಿ (97ಕೆಜಿ), ಹಿತೇಂದ್ರ (125ಕೆಜಿ) ತಲಾ ಒಂದು ಚಿನ್ನದ ಪದಕ ಗಳಿಸಿದರು. 

ಭಾನುವಾರ ಅಮಿತ್ ಕುಮಾರ್, ಯೋಗೇಶ್ವರ್ ದತ್, ಪ್ರವೀಣ್ ರಾಣಾ ಮತ್ತು ನರಸಿಂಗ್ ಯಾದವ್ ಸ್ವರ್ಣಪದಕ ಗೆದ್ದಿದ್ದರು.
65 ಕೆಜಿ ವಿಭಾಗದಲ್ಲಿ ರಜನೀಶ್ ಕಂಚಿನ ಪದಕ ಗಳಿಸಿದರು.  ಇದರಿಂದಾಗಿ ಭಾರತ ತಂಡಕ್ಕೆ ಎಂಟು ಚಿನ್ನದ ಪದಕಗಳು ಸೇರಿದಂತೆ ಒಟ್ಟು ಒಂಬತ್ತು ಪದಕಗಳು ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.