ADVERTISEMENT

ಕೊಕ್ಕೊ: ಕರ್ನಾಟಕ ತಂಡಗಳಿಗೆ ಪ್ರಶಸ್ತಿ

ಸಿದ್ದೇಶ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
ಕಲಬುರ್ಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯ ಗೊಂಡ ದಕ್ಷಿಣ ವಲಯ ಅಂತರರಾಜ್ಯ ಕೊಕ್ಕೊ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಪುರುಷರ ತಂಡ. (ಎಡದಿಂದ ಕುಳಿತ ವರು) ದಿಲೀಪ್‌ ಹರವಿ, ಎಚ್‌.ಎನ್‌. ಶಿವಕುಮಾರ್‌, ಎಂ.ಕೆ. ಗೌತಮ್‌, ಎ. ಮುನೀರ್‌ ಪಾಷಾ, ಇ. ಶಹಬಾಜ್‌ ಮತ್ತು ಎನ್‌. ಅಭಿಷೇಕ್‌. (ನಿಂತವರು) ರಮೇಶ್‌, ಎಸ್‌. ಶರತ್‌, ಮನು, ಬಸವರಾಜ್‌ ರಾಯ್ಕಲ್‌ (ಮ್ಯಾನೇಜರ್‌), ಸಿ.ಎ. ಮನೋಹರ್‌ (ಕೋಚ್‌), ಕೆ.ಒ. ಪ್ರವೀಣ್‌, ಎ.ವಿ. ಮಧು ಮತ್ತು ಸುದರ್ಶನ್‌    ಪ್ರಜಾವಾಣಿ ಚಿತ್ರಗಳು/ಎಚ್‌. ಜಿ. ಪ್ರಶಾಂತ್

ಕಲಬುರ್ಗಿ: ತವರಿನ ಅಭಿಮಾನಿಗಳ ಎದುರು ಅಮೋಘ ಆಟವಾಡಿದ ಕರ್ನಾಟಕ ಮಹಿಳಾ ಮತ್ತು ಪುರುಷರ ತಂಡಗಳು  ದಕ್ಷಿಣ ವಲಯ ಅಂತರ ರಾಜ್ಯ ಕೊಕ್ಕೊ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ.

ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ  ನಡೆದ ಪುರುಷರ ವಿಭಾಗದ ಫೈನಲ್‌ ಹಣಾ ಹಣಿಯಲ್ಲಿ  ರಾಜ್ಯ ತಂಡ 16–10 ಪಾಯಿಂಟ್ಸ್‌ನಿಂದ ಹಾಲಿ ಚಾಂಪಿಯನ್‌ ಕೇರಳ ವಿರುದ್ಧ ಜಯಭೇರಿ ಮೊಳ ಗಿಸಿತು. ಇದರೊಂದಿಗೆ ಹೋದ ವರ್ಷ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.

ಮುನೀರ್‌ ಪಾಷಾ ನೇತೃತ್ವದ ತಂಡ ಮೊದಲ ಅವಧಿಯಲ್ಲಿ 8–6 ಅಂಕ ಗಳಿಂದ ಶ್ರೀಜಿತ್‌ ನೇತೃತ್ವದ ಕೇರಳ ತಂಡದ ವಿರುದ್ಧ ಮೇಲುಗೈ ಸಾಧಿಸಿತು.  ಆರಂಭದಿಂದಲೇ ರೋಚಕತೆ ಕಾಯ್ದುಕೊಂಡು ಸಾಗಿದ ಪಂದ್ಯದಲ್ಲಿ ರಾಜ್ಯ ತಂಡದ ಆಟಗಾರರು ಅತ್ಯುತ್ತಮ ಡೈವ್‌ಗಳ ಮೂಲಕ ಗಮನ ಸೆಳೆದರು. 

ಎರಡನೇ ಅವಧಿಯಲ್ಲಿ ಕರ್ನಾಟಕ ತಂಡದ ಆಟ ರಂಗೇರಿತು. ಚೇಸಿಂಗ್‌ ಹಾಗೂ ಡಿಫೆಂಡಿಂಗ್‌ ವಿಭಾಗಗಳಲ್ಲಿ ಮನಮೋಹಕ ಆಟ ಆಡಿ ಪಾಯಿಂಟ್ಸ್‌ ಹೆಕ್ಕಿದ ಕರ್ನಾಟಕದ ಆಟಗಾರರು ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ  ಉಣಬಡಿಸಿದರು. ಇದಕ್ಕೂ ಮುನ್ನ ನಡೆದ 4ನೇ ಪಂದ್ಯದಲ್ಲಿ ಕರ್ನಾ ಟಕ ತಂಡ 10–5ರಿಂದ ತೆಲಂಗಾಣ ವನ್ನು ಮಣಿಸಿತ್ತು.  

ವನಿತೆಯರಿಗೆ ಚಾಂಪಿಯನ್‌ಪಟ್ಟ  
ಮಹಿಳೆಯರ ವಿಭಾಗದಲ್ಲೂ ಕರ್ನಾಟಕ ತಂಡ ಮಿಂಚಿತು.  ಫೈನಲ್ ಹೋರಾಟದಲ್ಲಿ ಕೆ.ಎಸ್‌. ಮೇಘಾ ನೇತೃತ್ವದ ಕರ್ನಾಟಕ   8–7 ಪಾಯಿಂಟ್ಸ್‌ ನಿಂದ ಕೇರಳ ವನಿತೆ ಯರನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯಿತು.  ಮೊದಲ ಅವಧಿಯಲ್ಲಿ (4–2) ಸುಮಾರು ನಾಲ್ಕು ನಿಮಿಷ  ಡಿಫೆಂಡಿಂಗ್‌ ಮಾಡುವ ಮೂಲಕ ಕೇರಳ ಆಟಗಾರ್ತಿಯರನ್ನು ಕಾಡಿದ ನಾಯಕಿ ಮೇಘಾ, ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಎರಡನೇ ಅವಧಿಯಲ್ಲಿ ಅಜೇಯ ರಾಗಿ ಉಳಿಯುವ ಮೂಲಕ ಅವರು (4–5) ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.