ADVERTISEMENT

ಕ್ರಿಕೆಟಿಗ ಸುನಿಲ್‌ ನಿಧನ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST

ಮುಂಬೈ (ಪಿಟಿಐ): ಮಹಾರಾಷ್ಟ್ರದ ಲೆಗ್‌ ಸ್ಪಿನ್ನರ್‌ ಸುನಿಲ್‌ ಗಾಡ್ಗೆ (56) ಅವರು ಮಂಗಳವಾರ ಹೃದಯಾಘಾತ ದಿಂದ ನಿಧನ ಹೊಂದಿದ್ದಾರೆ.

ಮನೆಯಲ್ಲಿ ಟಿವಿ ನೋಡುವ ವೇಳೆ ಅವರಿಗೆ ಹೃದಯಾಘಾತವಾಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ. 

ಸುನಿಲ್‌ 55 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 1033 ರನ್ ಕಲೆ ಹಾಕಿದ್ದಾರೆ. 110 ವಿಕೆಟ್‌ ಕಬಳಿಸಿದ್ದಾರೆ. 1979ರಲ್ಲಿ ಸುನಿಲ್ ಪ್ರಥಮ ದರ್ಜೆ ಮಾದರಿಗೆ ಪದಾರ್ಪಣೆ ಮಾಡಿದ್ದರು. ಮೂರು ಲೀಸ್ಟ್‌ ಎ ಪಂದ್ಯಗಳನ್ನೂ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.