ADVERTISEMENT

ಕ್ರಿಕೆಟ್‌: ಅಲ್ಪ ಮೊತ್ತಕ್ಕೆ ಕುಸಿದ ಜಿಂಬಾಬ್ವೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ಢಾಕಾ (ಎಪಿ): ಶಕೀಬ್‌ ಅಲ್‌ ಹಸನ್‌ ಅವರ (59ಕ್ಕೆ 6) ಪ್ರಭಾವಿ ದಾಳಿಯ ಕಾರಣ ಜಿಂಬಾಬ್ವೆ ತಂಡ ಇಲ್ಲಿ ನಡೆ ಯುತ್ತಿರುವ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌  ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯಿತು. ಮೊದಲ ದಿನವಾದ ಶನಿವಾರ ಜಿಂಬಾಬ್ವೆ 240 ರನ್‌ಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಬ್ಯಾಟ್ಸ್‌ ಮನ್‌ ಸಿಕಂದರ್‌ ರಾಜಾ 51ರನ್‌ ಗಳಿಸಿ ಜಿಂಬಾಬ್ವೆ ಪರ ಅತಿಹೆಚ್ಚು ರನ್‌ ಗಳಿಸಿದ ಶ್ರೇಯಕ್ಕೆ ಪಾತ್ರರಾದರು.

ದಿನದಾಟ ಮುಗಿದಾಗ ಬಾಂಗ್ಲಾ ದೇಶ ಒಂದು ವಿಕೆಟ್‌ ಕಳೆದುಕೊಂಡು 27 ರನ್‌ ಗಳಿಸಿದೆ. ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ: ಮೊದಲ ಇನಿಂಗ್ಸ್: 75.5 ಓವರ್‌ಗಳಲ್ಲಿ 240 (ಸಿಕಂದರ್‌ ರಾಜಾ  51, ಬ್ರೆಂಡನ್‌ ಟೇಲರ್‌ 28, ಎಲ್ಟನ್‌ ಚಿಗುಂಬುರ 29; ಶಕೀಬ್‌ ಅಲ್‌ ಹಸನ್‌  59ಕ್ಕೆ 6, ಶಹಾದತ್‌ ಹೊಸೇನ್‌ 45ಕ್ಕೆ 1). ಬಾಂಗ್ಲಾದೇಶ:  12 ಓವರ್‌ಗಳಲ್ಲಿ 1 ವಿಕೆಟ್‌ಗೆ 27.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.