ADVERTISEMENT

ಕ್ರಿಕೆಟ್‌: ಬಾಂಗ್ಲಾಕ್ಕೆ ಭಾರತದ ಸವಾಲು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:10 IST
Last Updated 16 ಫೆಬ್ರುವರಿ 2017, 19:10 IST
ಕ್ರಿಕೆಟ್‌: ಬಾಂಗ್ಲಾಕ್ಕೆ  ಭಾರತದ ಸವಾಲು
ಕ್ರಿಕೆಟ್‌: ಬಾಂಗ್ಲಾಕ್ಕೆ ಭಾರತದ ಸವಾಲು   
ಕೊಲಂಬೊ: ಆಡಿದ ಐದೂ ಪಂದ್ಯಗಳನ್ನು ಗೆದ್ದುಕೊಂಡು ವಿಶ್ವಾಸದಲ್ಲಿರುವ ಭಾರತ ಮಹಿಳೆಯರ ತಂಡ ಶುಕ್ರವಾರ ಬಾಂಗ್ಲಾದೇಶ ಎದುರು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. 
 
ಮಹಿಳೆಯರ ವಿಶ್ವಕಪ್ ಅರ್ಹತಾ ಟೂರ್ನಿಯ ಸೂಪರ್‌ ಸಿಕ್ಸ್‌ ಹಂತದ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾ ದೇಶ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ.
 
ಬ್ಯಾಟಿಂಗ್ ಕ್ರಮಾಂಕದಲ್ಲಿ ಬದ ಲಾವಣೆ ಹಾಗೂ ಬೌಲರ್‌ಗಳ ಚುರುಕಿನ ದಾಳಿಯಿಂದಾಗಿ ಭಾರತ  ತಂಡ ಈಗಾಗಲೇ ಟೂರ್ನಿಯಲ್ಲಿ ಮಿಂಚು ಹರಿಸಿದೆ. 
ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿರುವ ಭಾರತ ಇದುವರೆಗೂ ಶ್ರೀಲಂಕಾ, ಥಾಯ್ಲೆಂಡ್‌, ಐರ್ಲೆಂಡ್‌, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ತಂಡಗಳನ್ನು ಎದುರಿಸಿ ಗೆಲುವು ಪಡೆದುಕೊಂಡಿದೆ.
 
ಆರಂಭಿಕ ಆಟಗಾರ್ತಿ ದೀಪ್ತಿ ಶರ್ಮಾ ತಮ್ಮ ನೂತನ ಕ್ರಮಾಂಕ ದಿಂದಾಗಿ ಬ್ಯಾಟಿಂಗ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.
 
ಅರ್ಹತಾ ಟೂರ್ನಿಯ 4 ಪಂದ್ಯಗಳಿಂದ 152 ರನ್ ಗಳಿಸಿರುವ ದೀಪ್ತಿ ಭಾರತದ ಪರ ಹೆಚ್ಚು ರನ್‌ ಕಲೆಹಾಕಿದ ಆಟಗಾರ್ತಿ ಎನಿಸಿದ್ದಾರೆ. ಎಲ್ಲಾ ತಂಡಗಳ ಆಟಗಾರ್ತಿಯರ ಸಾಲಿನಲ್ಲಿ ಆರನೇಯವರಾಗಿದ್ದಾರೆ. ಭಾರತದ ತಿರುಷ್‌ ಕಾಮಿನಿ, ಮಿಥಾಲಿ ರಾಜ್‌ ಕ್ರಮವಾಗಿ 137 ಹಾಗೂ 134 ರನ್‌ಗಳಿಂದ ನಂತರದ ಸ್ಥಾನಗಳಲ್ಲಿದ್ದಾರೆ.
 
ಬೌಲಿಂಗ್‌ನಲ್ಲಿ ಭಾರತಕ್ಕೆ ಪೂನಮ್ ಯಾದವ್ ಪ್ರಮುಖ ಆಸರೆಯಾಗಿದ್ದಾರೆ.
 
ಒಟ್ಟು 4 ಪಂದ್ಯಗಳಲ್ಲಿ ಅವರು 11 ವಿಕೆಟ್ ಪಡೆದು ಗಮನಸೆಳೆದಿದ್ದಾರೆ. ಅಲ್ಲದೇ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿದ್ದಾರೆ.
 
ಬಾಂಗ್ಲಾದೇಶ ಇದುವರೆಗೂ ಎರಡು ಪಂದ್ಯಗಳನ್ನು ಮಾತ್ರ ಗೆದ್ದು ಮೂರರಲ್ಲಿ ಸೋಲು ಅನುಭವಿಸಿದೆ. ರ್‍ಯಾಂಕಿಂಗ್ ಪಟ್ಟಿಯಲ್ಲಿ ಪಾಕಿಸ್ತಾನದ ಬಳಿಕ ಐದನೇ ಸ್ಥಾನದಲ್ಲಿದೆ. ಈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್ ಫ್ರಾಗ್ನಾ ಹಕ್ ಪುಟಿದೇಳುವ ಗುಣ ಹೊಂದಿದ್ದಾರೆ. ಇವರು ಭಾರತದ ಬೌಲರ್‌ಗಳಿಗೆ ಸವಾಲಾಗಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.