ADVERTISEMENT

ಕ್ವಾರ್ಟರ್‌ಗೆಜೋಷ್ನಾ

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಹಾಂಕಾಂಗ್‌ (ಪಿಟಿಐ): ಭಾರತದ ಭರವಸೆ ಎನಿಸಿರುವ ಜೋಷ್ನಾ ಚಿಣ್ಣಪ್ಪ ಮತ್ತು ಸೌರವ್‌ ಘೋಷಾಲ್‌ ಇಲ್ಲಿ ನಡೆಯುತ್ತಿರುವ ಎಚ್‌ಕೆಎಫ್‌ಸಿ ಅಂತರರಾಷ್ಟ್ರೀಯ ಸ್ಕ್ವಾಷ್‌ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ನಾಲ್ಕನೇ ಶ್ರೇಯಾಂಕದ ಜೋಷ್ನಾ 9–11, 11–8, 11–3, 11–7 ರಲ್ಲಿ ಡಿಯಾನ್‌ ಸಫೆರಿ ಎದುರು ಗೆದ್ದರು.

ಕ್ವಾರ್ಟರ್ ಫೈನಲ್‌ನಲ್ಲಿ ಜೋಷ್ನಾ ಮಲೇಷ್ಯಾದ ಡೆಲಿಯಾ ಅರ್ನಾಲ್ಡ್‌ ಅವರ ಸವಾಲು ಎದುರಿಸಲಿದ್ದಾರೆ.
ಎಂಟರ ಘಟ್ಟಕ್ಕೆ ಸೌರವ್‌: ಪುರುಷರ ಸಿಂಗಲ್ಸ್‌ ವಿಭಾಗದ 16ರ ಘಟ್ಟದ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ಸೌರವ್‌ ಘೋಷಾಲ್‌ 11–3, 11–7, 11–5 ರಲ್ಲಿ ಭಾರತದವರೇ ಆದ ಹರೀಂದರ್‌ ಪಾಲ್‌ ಸಂಧು ಅವರನ್ನು ಮಣಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ಸೌರವ್‌ ಮಲೇಷ್ಯಾದ ಅದ್ನಾನ್‌ ನಫಿಜ್ವಾನ್‌ ಎದುರು ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.