ADVERTISEMENT

ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪಿ.ವಿ ಸಿಂಧು ಚಾಂಪಿಯನ್‌

ಪಿಟಿಐ
Published 20 ನವೆಂಬರ್ 2016, 11:10 IST
Last Updated 20 ನವೆಂಬರ್ 2016, 11:10 IST
ಪಿ.ವಿ ಸಿಂಧು ಅವರ ಆಟದ ವೈಖರಿ.
ಪಿ.ವಿ ಸಿಂಧು ಅವರ ಆಟದ ವೈಖರಿ.   

ಪುಜೌ, ಚೀನಾ: ಒಲಿಂಪಿಕ್‌ನಲ್ಲಿ ಬೆಳ್ಳಿ ಗೆದ್ದು ಅಚ್ಚರಿ ಮೂಡಿಸಿದ್ದ ಭಾರತದ ಪಿ.ವಿ ಸಿಂಧು ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಸ್ಥಳೀಯ ಆಟಗಾರ್ತಿ ಸನ್‌ ಯು ಅವರನ್ನು 21-11, 17-21, 21-11 ಸೆಟ್‌ಗಳ ಅಂತರದಲ್ಲಿ ಮಣಿಸಿ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.

ಪಂದ್ಯ ಪ್ರಾರಂಭಗೊಂಡ 17 ನಿಮಿಷಗಳಲ್ಲಿ 21–11 ಅಂತರದಲ್ಲಿ ಮೊದಲ ಸೆಟ್‌ ಪೂರ್ಣಗೊಳ್ಳಿಸುವ ಮೂಲಕ ಎದುರಾಳಿ ಸನ್‌ ಯು ಅವರಿಗೆ ಕಠಿಣ ಪೈಪೋಟಿ ನೀಡಿದರು. ದ್ವಿತೀಯ ಸೆಟ್‌ನಲ್ಲಿ 17–21 ಅಂತರದಲ್ಲಿ ಸನ್‌ ಯು ಮುನ್ನಡೆ ಸಾಧಿಸಿದರು. ಆದರೆ ಧೃತಿಗೆಡದ ಪಿ.ವಿ ಸಿಂಧು ಅಂತಿಮ ಸೆಟ್‌ನಲ್ಲಿ 21–11 ಅಂತರ ಕಾಯ್ದುಕೊಳ್ಳುವ ಮೂಲಕ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.