ADVERTISEMENT

ಚೆನ್ನೈಯಿನ್ ತಂಡಕ್ಕೆ ಮೋಹನ್‌ರಾಜ್‌

​ಪ್ರಜಾವಾಣಿ ವಾರ್ತೆ
Published 19 ಜುಲೈ 2016, 19:30 IST
Last Updated 19 ಜುಲೈ 2016, 19:30 IST

ಚೆನ್ನೈ (ಪಿಟಿಐ):  ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯಲ್ಲಿ ಆಡಲಿರುವ ಚೆನ್ನೈಯಿನ್ ತಂಡದ ಪರ ಆಡಲು ನಲ್ಲಪ್ಪನ್‌ ಮೋಹನ್‌ ರಾಜ್‌ ಮತ್ತು ಧನಪಾಲ್‌ ಗಣೇಶ್ ಅವರು ಸಹಿ ಹಾಕಿದ್ದಾರೆ.

ಮೋಹನ್‌ ರಾಜ್‌ ಅವರು ಮೊದಲ ಎರಡು ಆವೃತ್ತಿಗಳಲ್ಲಿ ಅಟ್ಲೆಟಿಕೊ ಡಿ ಕೋಲ್ಕತ್ತ ತಂಡದಲ್ಲಿ ಆಡಿದ್ದರು. 2014ರ ಟೂರ್ನಿಯಲ್ಲಿ ತಂಡ ಚಾಂಪಿಯನ್ ಆಗಿತ್ತು. ಕೋಲ್ಕತ್ತ ಜೊತೆಗಿನ ಒಪ್ಪಂದ ಮುಗಿದ ಬಳಿಕ ಅವರು ಇಲ್ಲಿನ ತಂಡ ಸೇರಿಕೊಂಡಿದ್ದಾರೆ.

ಗಣೇಶ್ ಹೋದ ವರ್ಷ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಸೆಪ್ಟೆಂಬರ್‌ನಲ್ಲಿ ನಡೆದ ಟೂರ್ನಿಯ ವೇಳೆ ಗಾಯಗೊಂಡಿದ್ದರಿಂದ ಅವರು ಐಎಸ್‌ಎಲ್‌ ಟೂರ್ನಿಯಲ್ಲಿ ಆಡಿರಲಿಲ್ಲ. ಅವರು ಉತ್ತಮ ಆಟಗಾರರಾಗಿದ್ದು ತಂಡಕ್ಕೆ ಮಹತ್ವದ ಕಾಣಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.