ADVERTISEMENT

ಚೆಸ್‌: ಮುರಳಿ ಕಾರ್ತಿಕೇಯನ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 20:05 IST
Last Updated 26 ಆಗಸ್ಟ್ 2014, 20:05 IST

ಅಬುಧಾಬಿ, ಯುಎಇ (ಪಿಟಿಐ): ಭಾರತದ ಇಂಟರ್‌ನ್ಯಾಷನಲ್‌ ಮಾಸ್ಟರ್‌ ಮುರಳಿ ಕಾರ್ತಿಕೇಯನ್‌ ಇಲ್ಲಿ ನಡೆಯುತ್ತಿರುವ ಅಬುಧಾಬಿ ಮಾಸ್ಟರ್ಸ್‌ ಚೆಸ್‌ ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದಾರೆ.

ಮಂಗಳವಾರ ನಡೆದ ಆರನೇ ಸುತ್ತಿನ ಪಂದ್ಯದಲ್ಲಿ ಮುರಳಿ, ಉಕ್ರೇನ್‌ನ  ಗ್ರ್ಯಾಂಡ್‌ ಮಾಸ್ಟರ್‌ ಯೂರೀ ಕುಜುಬೊವ್‌ಗೆ ಆಘಾತ ನೀಡಿ ಪೂರ್ಣ ಪಾಯಿಂಟ್‌ ಕಲೆ ಹಾಕಿದರು.

ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಭಾರತದ ಆಟಗಾರ  ಆರು ಸುತ್ತುಗಳಿಂದ 5 ಪಾಯಿಂಟ್‌ ಕಲೆಹಾಕಿದ್ದಾರೆ.  ಇದರೊಂದಿಗೆ ಟೂರ್ನಿಯಲ್ಲಿ 2783 ಇಎಲ್‌ಒ ಪಾಯಿಂಟ್ಸ್‌ ಪಡೆದಿರುವ ಮುರಳಿ ಗ್ರ್ಯಾಂಡ್‌ ಮಾಸ್ಟರ್‌ ಕಿರೀಟ ಮುಡಿಗೇ ರಿಸಿಕೊಳ್ಳುವತ್ತ ಮುಂದಡಿ ಇಟ್ಟಿದ್ದಾರೆ.

ಭಾರತದ ಆಟಗಾರ  ಉಳಿದ ಮೂರು ಸುತ್ತುಗಳ ಪೈಕಿ ಒಂದು ಇಲ್ಲವೇ ಎರಡರಲ್ಲಿ ಡ್ರಾ ಸಾಧಿಸಿದರೂ ಗ್ರ್ಯಾಂಡ್‌ ಮಾಸ್ಟರ್  ಗೌರವಕ್ಕೆ ಪಾತ್ರರಾಗಲಿದ್ದಾರೆ.

ಡ್ರಾ ಸಾಧಿಸಿದ ಗುಜರಾತಿ: ಆರನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿದಿತ್ ಸಂತೋಷ್‌ ಗುಜರಾತಿ, ಭಾರತದವರೇ ಆದ ಜಿ.ಎನ್. ಗೋಪಾಲ್‌ ಅವರ ಜೊತೆ ಡ್ರಾ ಸಾಧಿಸಿ ಪಾಯಿಂಟ್‌ ಹಂಚಿಕೊಂಡರು.

ಈ ಡ್ರಾದೊಂದಿಗೆ ಉಭಯ ಆಟಗಾರರು  ಒಟ್ಟು ಪಾಯಿಂಟ್‌ ಅನ್ನು 4.5 ಕ್ಕೆ ಹೆಚ್ಚಿಸಿಕೊಂಡಿದ್ದು,  ಪಾಯಿಂಟ್‌ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

ಇತರೆ ಪಂದ್ಯಗಳಲ್ಲಿ ಎಂ.ಆರ್. ಲಲಿತ್‌ ಬಾಬು, ಅತೌಸಾ ಪೌರಕಾಶಿಯನ್‌ ಎದುರೂ, ವೈಭವ್‌ ಸೂರಿ, ಥಾಮಸ್‌ ಮೆಸ್‌ಜಾರೊಸ್‌  ಮೇಲೂ, ಶ್ರಾದೂಲ್‌ ಗಗಾರೆ, ಎಲ್‌.ಎನ್‌. ರಾಮ್‌ ಅರವಿಂದ ವಿರುದ್ಧವೂ, ಈಶ ಕರವದೆ, ಒಸಾಮ ಜಯಾನ್‌ ಮೇಲೂ ಗೆಲುವು ದಾಖಲಿಸಿ ಪೂರ್ಣ ಪಾಯಿಂಟ್‌ ಗಳಿಸಿದರು.

ಗಂಗೂಲಿಗೆ ಸೋಲು:  ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಸೂರ್ಯ ಶೇಖರ್‌ ಗಂಗೂಲಿ , ಬರ್ನಾವುರೆ ವ್ಲಾಡ್‌ ವಿಕ್ಟರ್‌ ಎದುರು ಸೋಲು ಕಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.