ADVERTISEMENT

ಚೆಸ್‌: ಭಾರತ ತಂಡಕ್ಕೆ ಜಯ

ಪಿಟಿಐ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST

ಕಂಟಿ, ರಷ್ಯಾ: ಭಾರತದ ಪುರುಷ ಹಾಗೂ ಮಹಿಳೆಯರ ತಂಡಗಳೆರಡೂ ಇಲ್ಲಿ ನಡೆಯುತ್ತಿರುವ ವಿಶ್ವ ತಂಡ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಗೆಲುವು ದಾಖಲಿಸಿವೆ.

ಐದನೇ ಸುತ್ತಿನ ಪಂದ್ಯದಲ್ಲಿ ಪುರುಷರ ತಂಡ 1.5–2.5ರಲ್ಲಿ ಈಜಿಪ್ಟ್ ತಂಡವನ್ನು ಮಣಿಸಿತು.

ಮೊದಲ ಪಂದ್ಯವನ್ನು ವಿದಿತ್ ಗುಜರಾತಿ ಡ್ರಾ ಮಾಡಿಕೊಂಡರು. ಎರಡನೇ ಪಂದ್ಯದಲ್ಲಿ ಬಿ. ಅಧಿಬನ್ ಗೆಲುವು ದಾಖಲಿಸಿದರು. ಮುರಳಿ ಕಾರ್ತಿಕೇಯನ್ ಪಾಯಿಂಟ್ಸ್ ಹಂಚಿಕೊಂಡರು. ಪರಿಮಾರ್ಜನ್ ನೇಗಿ ಕೂಡ ಡ್ರಾ ಸಾಧಿಸಿದರು.

ADVERTISEMENT

ಭಾರತದ ಮಹಿಳೆಯರ ತಂಡ ಕೂಡ ಈಜಿಪ್ಟ್ ವಿರುದ್ಧ ಜಯಗಳಿಸಿತು.

ಮೊದಲ ಪಂದ್ಯದಲ್ಲೇ ಹರಿಕಾ ಸೋಲು ಕಂಡರು. ಆದರೆ ಹಿಂದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ತಾನಿಯಾ ಸಚ್‌ದೇವ್ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಬಳಿಕ ಇಶಾ ಕರ್ವಾಡೆ ಕೂಡ ಜಯದಾಖಲಿಸಿದರು. ಎಸ್‌. ವಿಜಯಲಕ್ಷ್ಮಿ ಕೂಡ ನಾಲ್ಕನೇ ಪಂದ್ಯ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.