ADVERTISEMENT

ಜಪಾನ್ ಓಪನ್ ಬ್ಯಾಡ್ಮಿಂಟನ್: ಅಕ್ಸೆಲ್‌ಸನ್‌ಗೆ ಪ್ರಶಸ್ತಿಯ ಗರಿ

ಏಜೆನ್ಸೀಸ್
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಪ್ರಶಸ್ತಿಯೊಂದಿಗೆ ವಿಕ್ಟರ್ ಅಕ್ಸೆಲ್‌ಸನ್‌
ಪ್ರಶಸ್ತಿಯೊಂದಿಗೆ ವಿಕ್ಟರ್ ಅಕ್ಸೆಲ್‌ಸನ್‌   

ಟೋಕಿಯೊ (ಎಎಫ್‌ಪಿ): ವಿಶ್ವ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್‌ಸನ್‌ ಜಪಾನ್ ಓಪನ್ ಸೂಪರ್ ಸೀರಿಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾನುವಾರ ಪ್ರಶಸ್ತಿ ಎತ್ತಿಹಿಡಿದಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಅಕ್ಸೆಲ್‌ಸನ್‌ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ 21–14, 19–21, 21–14ರಲ್ಲಿ ಮಲೇಷ್ಯಾದ ಲೀ ಚಾಂಗ್ ವೀ ಅವರನ್ನು ಮಣಿಸಿ ಮೊದಲ ಬಾರಿಗೆ ಇಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಲೀ ಆರು ಬಾರಿ ಜಪಾನ್ ಓಪನ್ ಗೆದ್ದುಕೊಂಡಿದ್ದಾರೆ. ಸುಲಭದಲ್ಲಿ ಮೊದಲ ಗೇಮ್‌ ಗೆದ್ದುಕೊಂಡ ಅಕ್ಸೆಲ್‌ಸನ್ ಎರಡನೇ ಗೇಮ್‌ನಲ್ಲಿ ತೀವ್ರ ಪ್ರತಿರೋಧ ಎದುರಿಸಿದರು. ಲೀ ತಮ್ಮ ಅನುಭವದ ಆಟದಿಂದ ಅಕ್ಸೆಲ್‌ಸನ್ ಅವರ ಮೇಲೆ ಒತ್ತಡ ಹೇರಿದರು. ಮೂರನೇ ಗೇಮ್‌ನಲ್ಲಿ ಡೆನ್ಮಾರ್ಕ್‌ನ ಆಟಗಾರ ತಮ್ಮ ಎಂದಿನ ಆಟದ ಮೂಲಕ ಗೆದ್ದರು.

ADVERTISEMENT

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ಯಾರೊಲಿನಾ ಮರಿನ್ ಪ್ರಶಸ್ತಿ ಜಯಿಸಿದ್ದಾರೆ. ಫೈನಲ್‌ನಲ್ಲಿ ಅವರು 23–21, 21–12ರಲ್ಲಿ
ಚೀನಾದ ಬಿಂಗ್ಜಿಯಾವೊ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.