ADVERTISEMENT

‘ಜೂನಿಯರ್‌ ವಿಶ್ವಕಪ್‌ ಉತ್ತಮ ವೇದಿಕೆ’

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2016, 19:30 IST
Last Updated 8 ಸೆಪ್ಟೆಂಬರ್ 2016, 19:30 IST
ವಿದ್ಯಾರ್ಥಿಗಳೊಂದಿಗೆ ಬೈಚುಂಗ್ ಭುಟಿಯಾ ಸೆಲ್ಫಿ
ವಿದ್ಯಾರ್ಥಿಗಳೊಂದಿಗೆ ಬೈಚುಂಗ್ ಭುಟಿಯಾ ಸೆಲ್ಫಿ   

ಬೆಂಗಳೂರು: ‘ಮುಂದಿನ ವರ್ಷ  ನಡೆ ಯಲಿರುವ 17 ವರ್ಷದ ಒಳಗಿನವರ ವಿಶ್ವಕಪ್‌ ಟೂರ್ನಿ ಭಾರತದಲ್ಲಿ ತಳ ಮಟ್ಟದಿಂದ ಫುಟ್‌ಬಾಲ್‌ ಬೆಳೆಯಲು ಉತ್ತಮ ವೇದಿಕೆಯಾಗಲಿದೆ’ ಎಂದು ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಅಭಿಪ್ರಾಯ ಪಟ್ಟಿದ್ದಾರೆ.

ಭುಟಿಯಾ ಉದ್ಯಾನನಗರಿಯಲ್ಲಿ ಫುಟ್‌ಬಾಲ್‌ ಶಾಲೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು  ಗುರುವಾರ ನಗರಕ್ಕೆ ಬಂದಿದ್ದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.

‘ಕಳೆದ ಐದಾರು ವರ್ಷಗಳಲ್ಲಿ ಭಾರತದ ಫುಟ್‌ಬಾಲ್‌ನಲ್ಲಿ ಆಗಿರುವ ಗಮನಾರ್ಹ ಬೆಳವಣಿಗೆ ನನ್ನಲ್ಲಿ ಅಚ್ಚರಿ ಮೂಡಿಸಿದೆ. ಆಗೆಲ್ಲಾ ಫುಟ್‌ಬಾಲ್‌ ಕ್ಲಬ್‌ಗಳನ್ನು ಹುಡುಕಿದರೂ ಸಿಗುತ್ತಿರಲಿಲ್ಲ. ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ. ನೂರಾರು ಕ್ಲಬ್‌ಗಳು ಬಂದಿವೆ. ಆಗೆಲ್ಲಾ ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ನಡೆಸಲು ಕ್ಲಬ್‌ಗಳನ್ನು ಹುಡುಕಬೇಕಿತ್ತು’ ಎಂದೂ ಭುಟಿಯಾ ಹೇಳಿದರು.

‘ಅಂತರರಾಷ್ಟ್ರೀಯ ಫುಟ್‌ಬಾಲ್‌ ನಿಂದ ನಿವೃತ್ತಿಯಾದ ಬಳಿಕ  ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಜೊತೆ ಸೇರಿ ಆದಷ್ಟು ಈ ಕ್ರೀಡೆಯ ಬೆಳ ವಣಿಗೆಗೆ ಶ್ರಮಿಸುತ್ತಿದ್ದೇನೆ. ಆಯಾ ರಾಜ್ಯ ಸರ್ಕಾರಗಳೂ ಫುಟ್‌ಬಾಲ್‌ ಬೆಳವಣಿಗೆಗೆ ನೆರವಾಗಬೇಕು. ಜೊತೆಗೆ ಈ ಕ್ರೀಡೆಯ ಬೆಳವಣಿಗೆ ಪ್ರಾಮುಖ್ಯತೆ ಯ ಕುರಿತು ರಾಜ್ಯ ಸರ್ಕಾರಗಳು ಚಿಂತನೆ ನಡೆಸಬೇಕೆಂದು’ ಭುಟಿಯಾ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.