ADVERTISEMENT

ಜೂನ್‌ನಲ್ಲಿ ಭಾರತ–ಜಿಂಬಾಬ್ವೆ ಕ್ರಿಕೆಟ್‌ ಸರಣಿ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST

ನವದೆಹಲಿ (ಪಿಟಿಐ): ಮೂರು ಏಕದಿನ ಮತ್ತು ಎರಡು ಟ್ವೆಂಟಿ–20 ಪಂದ್ಯಗಳ ಕ್ರಿಕೆಟ್‌ ಸರಣಿ ಆಡಲು ಭಾರತ ತಂಡ ಮುಂದಿನ ತಿಂಗಳು ಜಿಂಬಾಬ್ವೆ ಪ್ರವಾಸಕ್ಕೆ ತೆರಳಲಿದೆ.

ಪಂದ್ಯಗಳು ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆಯಲಿವೆ.  ಮೊದಲ ಏಕದಿನ ಪಂದ್ಯ ಜೂನ್ 11ರಂದು ಕೊನೆಯ ಟ್ವೆಂಟಿ–20 ಪಂದ್ಯ  22ರಂದು ಜರುಗಲಿದೆ.

ಹೋದ ವರ್ಷವೂಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಆಗ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಿದ್ದರು. ಆಗ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಎರಡು ಪಂದ್ಯಗಳ ಟ್ವೆಂಟಿ–20 ಸರಣಿ 1–1ರಲ್ಲಿ ಡ್ರಾ ಆಗಿತ್ತು. ಹಿಂದಿನ ಅರು ವರ್ಷಗಳ ಅವಧಿಯಲ್ಲಿ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಳ್ಳುತ್ತಿರುವುದು ಇದು ಆರನೇ ಬಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.