ADVERTISEMENT

ಜೈನ್‌ ವಿ.ವಿ. ತಂಡಗಳಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST
ಬೆಂಗಳೂರಿನಲ್ಲಿ ನಡೆದ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಜೈನ್‌ ವಿಶ್ವವಿದ್ಯಾಲಯದ ಪುರುಷರ ಮತ್ತು ಮಹಿಳಾ ತಂಡದವರು ಟ್ರೋಫಿಯೊಂದಿಗೆ (ನಿಂತವರು, ಎಡದಿಂದ), ನಿತಿನ್‌ ಪಾಟೀಲ, ವೈಶಾಖ್‌ ನಂಬಿಯಾರ್‌, ಬ್ರಯಾನ್‌, ಮೋನಿಕಾ, ಸುಪ್ರಿತಾ, ಸುಮಿತ್‌ ಕೌರ್‌, ಆಕರ್ಷಣ್‌, ಕಿಶೆನ್‌, ಧರಣ
ಬೆಂಗಳೂರಿನಲ್ಲಿ ನಡೆದ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಜೈನ್‌ ವಿಶ್ವವಿದ್ಯಾಲಯದ ಪುರುಷರ ಮತ್ತು ಮಹಿಳಾ ತಂಡದವರು ಟ್ರೋಫಿಯೊಂದಿಗೆ (ನಿಂತವರು, ಎಡದಿಂದ), ನಿತಿನ್‌ ಪಾಟೀಲ, ವೈಶಾಖ್‌ ನಂಬಿಯಾರ್‌, ಬ್ರಯಾನ್‌, ಮೋನಿಕಾ, ಸುಪ್ರಿತಾ, ಸುಮಿತ್‌ ಕೌರ್‌, ಆಕರ್ಷಣ್‌, ಕಿಶೆನ್‌, ಧರಣ   

ಬೆಂಗಳೂರು: ಜೈನ್‌ ವಿಶ್ವವಿದ್ಯಾಲಯದ ಪುರುಷರ ಮತ್ತು ಮಹಿಳಾ ತಂಡದವರು ಸೇಂಟ್‌ ಜಾನ್‌ ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ನಡೆದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಮಹಿಳಾ ವಿಭಾಗದ ಫೈನಲ್‌ ಹೋರಾಟದಲ್ಲಿ ಜೈನ್‌ ವಿಶ್ವವಿದ್ಯಾಲಯವು 51–39 ಪಾಯಿಂಟ್ಸ್‌ನಿಂದ ಸೇಂಟ್‌ ಜೋಸೆಫ್‌ ವಾಣಿಜ್ಯ ಕಾಲೇಜು ತಂಡವನ್ನು ಪರಾಭವಗೊಳಿಸಿತು.

ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ಎದುರಾಳಿಗಳನ್ನು ಸೋಲಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಜೈನ್‌ ವಿ.ವಿ ತಂಡದ ವನಿತೆಯರು ಪ್ರಶಸ್ತಿ ಸುತ್ತಿನ ಹೋರಾಟದಲ್ಲೂ ಅಪೂರ್ವ ಸಾಮರ್ಥ್ಯ ತೋರಿದರು.

ADVERTISEMENT

31–21ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಗಿದ್ದ ಈ ತಂಡದವರು ದ್ವಿತೀಯಾರ್ಧದಲ್ಲೂ ನಿರಂತರವಾಗಿ ಪಾಯಿಂಟ್ಸ್‌ ಕಲೆಹಾಕಿ ಗೆದ್ದರು.

ಈ ತಂಡದ ಮಧು ಮತ್ತು ಮೋನಿಕಾ ಅವರು ಕ್ರಮವಾಗಿ 14 ಮತ್ತು 15 ಪಾಯಿಂಟ್ಸ್‌ ಸಂಗ್ರಹಿಸಿದರು. ಪುರುಷರ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಜೈನ್‌ ವಿ.ವಿ ತಂಡ 65–59ರಲ್ಲಿ ಕ್ರೈಸ್ಟ್‌ ವಿಶ್ವವಿದ್ಯಾಲಯ ತಂಡದ ವಿರುದ್ಧ ಗೆದ್ದಿತು.

ವಿಜಯಿ ತಂಡದ ಬ್ರಯಾನ್‌ 22 ಪಾಯಿಂಟ್ಸ್‌ ಗಳಿಸಿದರೆ, ವೈಶಾಖ್‌ 14 ಪಾಯಿಂಟ್ಸ್‌ ಕಲೆಹಾಕಿದರು. ಕ್ರೈಸ್ಟ್‌ ತಂಡದ ಮೈಕಲ್‌ (12) ಮತ್ತು ಲಿಜೊ (18) ಕೂಡ ಚುರುಕಿನ ಆಟವಾಡಿ ಗಮನ ಸೆಳೆದರು. ವಿಜಯಿ ತಂಡ ವಿರಾಮದ ವೇಳೆಗೆ 33–31ರಲ್ಲಿ ಮುನ್ನಡೆ ಗಳಿಸಿತ್ತು. ಬಳಿಕವೂ ದಿಟ್ಟ ಆಟ ಆಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.