ADVERTISEMENT

ಡ್ರಾ ಪಂದ್ಯದಲ್ಲಿ ಯುನೈಟೆಡ್‌ ಕ್ಲಬ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST

ಬೆಂಗಳೂರು: ಸರ್‌ ಮಿರ್ಜಾ ಇಸ್ಮಾಯಿಲ್ ಟ್ರೋಫಿಗಾಗಿ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸಿರುವ ಗುಂಪು–1ರ ಮೊದಲ ಡಿವಿಷನ್‌ ಟೂರ್ನಿಯ ಬೆಂಗಳೂರು ಯುನೈಟೆಡ್‌ ಕ್ಲಬ್ ಮತ್ತು ಜವಾನ್ಸ್‌ ಕ್ಲಬ್ ನಡುವಣ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ.

ಮೊದಲು ಬ್ಯಾಟ್ ಮಾಡಿದ್ದ ಬೆಂಗ ಳೂರು ಯುನೈಟೆಡ್‌ ಮೊದಲ ಇನಿಂಗ್ಸ್‌ ನಲ್ಲಿ 167 ರನ್‌ ಗಳಿಸಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ 57.5 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 186 ರನ್ ಕಲೆ ಹಾಕಿತು.  ಜವಾನ್ಸ್ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 75.2 ಓವರ್‌ ಗಳಲ್ಲಿ 216 ರನ್ ಗಳಿಸಿತು.

ಇತರ ಪಂದ್ಯಗಳ ಸಂಕ್ಷಿಪ್ತ ಸ್ಕೋರು: ಮೌಂಟ್ ಜಾಯ್‌ ಕ್ಲಬ್‌ ಮೊದಲ ಇನಿಂಗ್ಸ್‌ 117 ಹಾಗೂ ದ್ವಿತೀಯ ಇನಿಂಗ್ಸ್‌ 64.3 ಓವರ್‌ಗಳಲ್ಲಿ 246. ಬೆಂಗಳೂರು ಅಕೇಷನಲ್ಸ್‌ 72.1 ಓವರ್‌ ಗಳಲ್ಲಿ 6ಕ್ಕೆ338 ಎರಡನೇ ಇನಿಂಗ್ಸ್‌ 3.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 28.
ಫಲಿತಾಂಶ: ಬೆಂಗಳೂರು ಅಕೇಷನಲ್ಸ್‌ ತಂಡಕ್ಕೆ ಹತ್ತು ವಿಕೆಟ್‌ ಗೆಲುವು ಹಾಗೂ ಐದು ಪಾಯಿಂಟ್ಸ್‌.

ವಲ್ಚರ್ಸ್‌ ಕ್ಲಬ್‌ (1) ಮೊದಲ ಇನಿಂಗ್ಸ್‌ 148 ಹಾಗೂ ದ್ವಿತೀಯ ಇನಿಂಗ್ಸ್‌ 50.1 ಓವರ್‌ಗಳಲ್ಲಿ 5ಕ್ಕೆ228. ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ 55.5 ಓವರ್‌ಗಳಲ್ಲಿ 235. ಫಲಿತಾಂಶ: ಡ್ರಾ.

ಫ್ರೆಂಡ್ಸ್‌ ಯೂನಿಯನ್ ಮೊದಲ ಇನಿಂಗ್ಸ್‌ 72.4 ಓವರ್‌ಗಳಲ್ಲಿ 322 ಹಾಗೂ ಎರಡನೇ ಇನಿಂಗ್ಸ್‌ 18  ಓವರ್‌ಗಳಲ್ಲಿ 1 ವಿಕೆಟ್‌ಗೆ 78. ಹೆರಾನ್ಸ್ ಕ್ಲಬ್‌ ಪ್ರಥಮ ಇನಿಂಗ್ಸ್‌ 61.3 ಓವರ್‌ಗಳಲ್ಲಿ 245. ಫಲಿತಾಂಶ: ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.