ADVERTISEMENT

ತ್ರಿಕೋನ ಸರಣಿಗೆ ಭಾರತ ‘ಎ’ ತಂಡ ಪ್ರಕಟ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 9:42 IST
Last Updated 1 ಆಗಸ್ಟ್ 2015, 9:42 IST

ಚೆನ್ನೈ (ಪಿಟಿಐ): ಆಸ್ಟ್ರೇಲಿಯಾ ‘ಎ’ ಹಾಗೂ ದಕ್ಷಿಣ ಆಫ್ರಿಕಾ ‘ಎ’ ಜತೆಗಿನ ಮುಂಬರುವ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಗೆ 15 ಆಟಗಾರರ ಭಾರತ ‘ಎ’ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ದೆಹಲಿಯ ಯುವ ಬ್ಯಾಟ್ಸ್‌ಮನ್ ಉನ್ಮುಕ್ತ್ ಚಾಂದ್ ಅವರಿಗೆ ನಾಯಕತ್ವದ ಹೊಣೆ ನೀಡಲಾಗಿದೆ.

ಆಗಸ್ಟ್‌ 5ರಿಂದ ಇಲ್ಲಿ ಆರಂಭಗೊಳ್ಳಲಿರುವ ಸರಣಿಗೆ ಕರ್ನಾಟಕದ ಬ್ಯಾಟ್ಸ್‌ಮನ್‌ ಕರುಣ್ ನಾಯರ್‌ ಅವರನ್ನು ತಂಡದ ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಆಗಸ್ಟ್‌ 14ರ ವರೆಗೂ ನಡೆಯಲಿರುವ ಸರಣಿಯ ಎಲ್ಲಾ ಪಂದ್ಯಗಳು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿವೆ.

ADVERTISEMENT

ರಾಯುಡು ಸಾರಥ್ಯ: ಇನ್ನು, ತ್ರಿಕೋನ ಏಕದಿನ ಸರಣಿಯ ಬಳಿಕ ಆಗಸ್ಟ್‌ 18ರಿಂದ ವೈನಾಡಿನಲ್ಲಿ ಆರಂಭಗೊಳ್ಳಲಿರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅಂಬಟಿ ರಾಯುಡು ಅವರು ಭಾರತ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ.

ಏಕದಿನ ತಂಡ: ಉನ್ಮುಕ್ತ್ ಚಾಂದ್ (ನಾಯಕ), ಮಯಾಂಕ್ ಅಗರ್ವಾಲ್, ಮನಿಷ್ ಪಾಂಡೆ, ಕರುಣ್ ನಾಯರ್(ಉಪನಾಯಕ), ಕೇದಾರ್ ಜಾದವ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಪರ್ವೇಜ್ ರಸೂಲ್, ಕರಣ್ ಶರ್ಮಾ, ಧವಳ್ ಕುಲಕರ್ಣಿ, ಸಂದೀಪ್ ಶರ್ಮಾ, ರುಶ್ ಕಳರಿಯಾ, ಮನದೀಪ್ ಸಿಂಗ್, ಗುರುಕೀರತ್ ಸಿಂಗ್ ಮನ್ ಹಾಗೂ ರಿಷಿ ಧವನ್.

ಟೆಸ್ಟ್ ತಂಡ: ಅಂಬಟಿ ರಾಯುಡು (ನಾಯಕ), ಕರುಣ್ ನಾಯರ್, ಅಭಿನವ್ ಮುಕುಂದ್, ಅಂಕುಶ್ ಬೈನ್ಸ್, ಶ್ರೇಯಸ್ಸ್‌ ಅಯ್ಯರ್, ಬ್ಬಾ ಅಪರಾಜಿತ್, ವಿಜಯ್ ಶಂಕರ್, ಜಯಂತ್ ಯಾದವ್, ಅಕ್ಷರ್ ಪಟೇಲ್, ಕರಣ್ ಶರ್ಮಾ, ಅಭಿಮನ್ಯು ಮಿಥುನ್, ಶ್ರಾದುಲ್ ಠಾಕೂರ್, ಈಶ್ವರ್ ಪಾಂಡೆ, ಶೆಲ್ಡಾನ್ ಜಾಕ್ಸ್‌ನ್‌ ಹಾಗೂ ಜಿವನ್‌ಜೊತ್‌ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.