ADVERTISEMENT

ಥಾಮಸ್ ಕಪ್‌ನತ್ತ ಚಿರಾಗ್‌, ಸಾತ್ವಿಕ್‌ ನೋಟ

ಪಿಟಿಐ
Published 23 ಏಪ್ರಿಲ್ 2018, 20:09 IST
Last Updated 23 ಏಪ್ರಿಲ್ 2018, 20:09 IST
ಥಾಮಸ್ ಕಪ್‌ನತ್ತ ಚಿರಾಗ್‌, ಸಾತ್ವಿಕ್‌ ನೋಟ
ಥಾಮಸ್ ಕಪ್‌ನತ್ತ ಚಿರಾಗ್‌, ಸಾತ್ವಿಕ್‌ ನೋಟ   

ನವದೆಹಲಿ: ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಮಿಶ್ರ ವಿಭಾಗದಲ್ಲಿ ಅಮೋಘ ಆಟ ಆಡಿದ ಸಾತ್ವಿಕ್ ರಣಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಇದೀಗ ಥಾಮಸ್ ಕಪ್‌ ಟೂರ್ನಿಯತ್ತ ಚಿತ್ತ ನೆಟ್ಟಿದ್ದಾರೆ.

ಮೇ 20ರಿಂದ 27ರ ವರೆಗೆ ಬ್ಯಾಂಕಾಕ್‌ನಲ್ಲಿ ನಡೆಯುವ ಟೂರ್ನಿಯಲ್ಲಿ ಉತ್ತಮ ಸಾಧನೆಯ ಕನಸು ಹೊತ್ತಿರುವ ಸಾತ್ವಿಕ್‌ 12ನೇ ತರಗತಿಯ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರೆ ಚಿರಾಗ್‌ ಸನ್ಮಾನ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸಾತ್ವಿಕ್‌ ಹತ್ತು ದಿನಗಳ ನಂತರ ತರಬೇತಿಗೆ ಹಾಜರಾಗಲಿದ್ದು ಚಿರಾಗ್‌ ಏಪ್ರಿಲ್ 25ರಿಂದ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಪರೀಕ್ಷೆ ಮುಗಿದ ಕೂಡಲೇ ತರಬೇತಿಗೆ ಹೋಗುತ್ತೇನೆ. ಮೂವರು ಉತ್ತಮ ಸಿಂಗಲ್ಸ್ ಆಟಗಾರರು ಮತ್ತು ಎರಡು ಪ್ರಭಾವಿ ಡಬಲ್ಸ್ ಜೋಡಿ ಇರುವುದರಿಂದ ಥಾಮಸ್ ಕಪ್‌ನ ತಂಡ ವಿಭಾಗದಲ್ಲಿ ಭಾರತ ಪ್ರಶಸ್ತಿ ಗೆಲ್ಲುವ ಎಲ್ಲ ಸಾಧ್ಯತೆಯೂ ಇದೆ’ ಎಂದು ಸಾತ್ವಿಕ್‌ ಹೇಳಿದರು.

ADVERTISEMENT

‘ಕಾಮನ್‌ವೆಲ್ತ್‌ ಕೂಟದಲ್ಲಿ ಮಾಡಿರುವ ಸಾಧನೆ ಅಭಿಮಾನ ತಂದಿದೆ. ಈ ಕೂಟಕ್ಕೆ ಆಯ್ಕೆಯಾಗುತ್ತೇವೆಯೋ ಇಲ್ಲವೋ ಎಂಬುದರ ಬಗ್ಗೆ ಒಂದು ವರ್ಷದ ಹಿಂದೆ ಸಂದೇಹ ಇತ್ತು. ಆದರೆ ಈಗ ತುಂಬ ಖುಷಿಯಾಗುತ್ತಿದೆ’ ಎಂದು ಚಿರಾಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.