ADVERTISEMENT

ನಾಲ್ಕು ರಾಷ್ಟ್ರಗಳ ಸರಣಿಯಿಂದ ಉತ್ತಮ ಅನುಭವ: ಜೂಲನ್‌

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ನಾಲ್ಕು ರಾಷ್ಟ್ರಗಳ ಸರಣಿಯಿಂದ ಉತ್ತಮ ಅನುಭವ: ಜೂಲನ್‌
ನಾಲ್ಕು ರಾಷ್ಟ್ರಗಳ ಸರಣಿಯಿಂದ ಉತ್ತಮ ಅನುಭವ: ಜೂಲನ್‌   

ಕೋಲ್ಕತ್ತ :  ದಕ್ಷಿಣ ಆಫ್ರಿಕಾದಲ್ಲಿ ಮುಕ್ತಾಯಗೊಂಡ ಮಹಿಳೆಯರ ನಾಲ್ಕು ರಾಷ್ಟ್ರಗಳ ಕ್ರಿಕೆಟ್‌ ಟೂರ್ನಿ ಮುಂಬರುವ ವಿಶ್ವಕಪ್ ಟೂರ್ನಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟಿದೆ ಎಂದು ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಶ್ರೇಯ ಹೊಂದಿರುವ ಜೂಲನ್‌ ಗೋಸ್ವಾಮಿ ಅಭಿಪ್ರಾಯಪಟ್ಟರು.

ದಕ್ಷಿಣ ಆಫ್ರಿಕಾದಿಂದ ಮರಳಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಜೂಲನ್‌ ‘ತಂಡದಲ್ಲಿ ಆಡುವಾಗ ವೈಯಕ್ತಿಕ ಸಾಧನೆಗಳು ನಗಣ್ಯ. ನಾನು ಕ್ರಿಕೆಟ್‌ ಮೇಲಿನ ಪ್ರೀತಿಯಿಂದ ಆಡಿದ್ದೇನೆಯೇ ಹೊರತು ದಾಖಲೆಗಾಗಿ ಅಲ್ಲ. ಆಡುತ್ತ ಆಡುತ್ತ ದಾಖಲೆ ನಿರ್ಮಾಣವಾಗಿದೆ’ ಎಂದು ಹೇಳಿದರು.

ಮಿಥಾಲಿ ಶತಕದ ಸಾಧನೆ
ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವುದರೊಂ ದಿಗೆ ಮಿಥಾಲಿ ರಾಜ್‌ ‘ಶತಕ’ ಸಾಧನೆ ಮಾಡಿದರು. ಅವರು ಈಗ ಭಾರತ ತಂಡವನ್ನು 100 ಪಂದ್ಯಗಳಲ್ಲಿ ಮುನ್ನಡೆಸಿದ ಏಕೈಕ ಆಟಗಾರ್ತಿ. ಶತಕ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ್ತಿ ಕೂಡ. ಇಂಗ್ಲೆಂಡ್‌ನ ಚಾರ್ಲೋಟ್‌ ಎಡ್ವರ್ಡ್ಸ್‌ (117 ಪಂದ್ಯಗಳು) ಮತ್ತು ಆಸ್ಟ್ರೇಲಿಯಾದ ಬೆಲಿಂದ ಕ್ಲಾರ್ಕ್‌ (101) ಕೂಡ 100 ಪಂದ್ಯಗಳಲ್ಲಿ  ತಂಡಗಳನ್ನು ಮುನ್ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.