ADVERTISEMENT

ಪ್ರಶಸ್ತಿ ಆಶಯಕ್ಕೆ ಬೌಲಿಂಗ್‌ ಬಲ

ಉತ್ತಮ ಸಾಮರ್ಥ್ಯ ನೀಡುತ್ತಿರುವ ಆರ್‌ಸಿಬಿ ಬೌಲರ್‌ಗಳು

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST
ಶೇನ್‌ ವ್ಯಾಟ್ಸನ್‌
ಶೇನ್‌ ವ್ಯಾಟ್ಸನ್‌   

ಬೆಂಗಳೂರು: ಮೂರೇ ಗಂಟೆಯಲ್ಲಿ ಮುಗಿದು ಹೋಗುವ ಐಪಿಎಲ್‌ ಪಂದ್ಯ ಎಂದಾಕ್ಷಣ ಬ್ಯಾಟ್ಸ್‌ಮನ್‌ಗಳ ಆಟ ಎಂದು ಷರಾ ಬರೆದುಬಿಡುವವರೇ ಹೆಚ್ಚು. ಇದು ಈ ಬಾರಿಯ ಟೂರ್ನಿಯ ಸಾಕಷ್ಟು ಪಂದ್ಯಗಳಲ್ಲಿ ಸಾಬೀತಾಗಿದೆ. ಆದರೆ, ಬೌಲಿಂಗ್ ಮೂಲಕವೂ ಪ್ರೇಕ್ಷ ಕರನ್ನು ಸೆಳೆಯುಬಹುದು ಎನ್ನುವುದು ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸಾಬೀತಾಯಿತು.

ಈ ಬಾರಿಯ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡವೆನಿಸಿರುವ ಆರ್‌ಸಿಬಿ ತಂಡದ ಬೌಲಿಂಗ್ ಬಗ್ಗೆ ಮಾತು ಬಂದಾಗಲೆಲ್ಲಾ ‘ದುರ್ಬಲ’ ಎನ್ನುವ ಮಾತು ಸಿದ್ಧವಾಗಿಯೇ ಇರುತ್ತಿತ್ತು. ವಿಶ್ವದ ಶ್ರೇಷ್ಠ ಆಟಗಾರರಾದ ವಿರಾಟ್‌ ಕೊಹ್ಲಿ, ಡಿವಿಲಿಯರ್ಸ್‌, ವ್ಯಾಟ್ಸನ್‌ ಅವರನ್ನು ಹೊಂದಿರುವ ಬೆಂಗ ಳೂರಿನ ತಂಡ  ಬ್ಯಾಟಿಂಗ್‌ನಲ್ಲಿ ಬಲಿಷ್ಠ ವಾಗಿದೆ. ಆದರೆ, ದುರ್ಬಲ ಬೌಲಿಂಗ್ ಸಾಕಷ್ಟು ಸಲ ಕಾಡಿದೆ. ಲೀಗ್‌ ಹಂತದಲ್ಲಿ ಆಡಿದ ಒಟ್ಟು 14 ಪಂದ್ಯಗಳಲ್ಲಿ ಎಂಟ ರಲ್ಲಿ ಆರ್‌ಸಿಬಿ ಜಯ ಪಡೆದಿದೆ. ಬ್ಯಾಟ್ಸ್‌ ಮನ್‌ಗಳ ಅಬ್ಬರದಿಂದಲೇ ಕೊಹ್ಲಿ ನಾಯಕತ್ವದ ತಂಡ ಗೆಲುವು ಪಡೆದದ್ದು ಹೆಚ್ಚು.

ಕೆಲ ಬಾರಿ ಸವಾಲಿನ ರನ್‌ ಕಲೆ ಹಾಕಿಯೂ ಆರ್‌ಸಿಬಿ ಸೋಲು ಕಂಡಿದೆ. ದುರ್ಬಲ ಬೌಲಿಂಗ್‌ ಇದಕ್ಕೆ ಕಾರಣ ವಾಗಿತ್ತು. ಇದನ್ನು ತಂಡದ ಬೌಲಿಂಗ್‌ ಕೋಚ್‌ ಆಲನ್‌ ಡೊನಾಲ್ಡ್‌ ಅವರೇ ಮಾಧ್ಯಮಗಳ ಎದುರು ಒಪ್ಪಿ ಕೊಂಡಿದ್ದರು.

‘ಮೂಲತಃ ನಮ್ಮ ತಂಡದ ಬೌಲಿಂಗ್ ಬಲಿಷ್ಠವಾಗಿಯೇ ಇತ್ತು. ಆದರೆ, ಮಿಷೆಲ್‌ ಸ್ಟಾರ್ಕ್‌, ಆ್ಯಡಮ್‌ ಮಿಲ್ನೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಬೌಲಿಂಗ್‌ನಲ್ಲಿ ಪದೇ ಪದೇ ಹಿನ್ನಡೆ ಅನುಭವಿಸುತ್ತಿ ದ್ದೇವೆ. ಈ ವಿಭಾಗದಲ್ಲಿ ಸುಧಾರಣೆ ಅಗ ತ್ಯವಿದೆ’ ಎಂದು ಡೊನಾಲ್ಡ್‌ ಹೇಳಿದ್ದರು.

ಹಿಂದಿನ ಎರಡು ಪಂದ್ಯಗಳಿಂದ ಆರ್‌ಸಿಬಿ ಚುರುಕಿನ ಬೌಲಿಂಗ್ ಮಾಡು ತ್ತಿದೆ. ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ನಿರ್ಣಾಯಕ ಲೀಗ್ ಪಂದ್ಯದಲ್ಲಿ ತಂಡ ಗೆಲುವು ಪಡೆಯಲು ಕಾರಣವಾಗಿದ್ದು ಕರಾರುವಾಕ್ಕಾದ ಬೌಲಿಂಗ್‌. ಸ್ಟುವರ್ಟ್‌ ಬಿನ್ನಿ, ಕ್ರಿಸ್‌ ಜೋರ್ಡಾನ್‌, ಯಜು ವೇಂದ್ರ ಚಾಹಲ್‌ ಮತ್ತು ಸಾಂದರ್ಭಿಕ ಬೌಲರ್‌ ಕ್ರಿಸ್‌ ಗೇಲ್‌ ಡೆಲ್ಲಿ ತಂಡವನ್ನು 138 ರನ್‌ಗೆ ಕಟ್ಟಿ ಹಾಕಿದ್ದರು. ಇದರಿಂದ ಆರ್‌ಸಿಬಿ ಗೆಲುವು ಸುಲಭವಾಗಿತ್ತು.

ಆರಂಭಿಕ ಪಂದ್ಯಗಳಲ್ಲಿನ ಮಾಡಿದ್ದ ನೀರಸ ಬೌಲಿಂಗ್‌ನಿಂದ ಹೊರಬಂದಿ ರುವ ಬೆಂಗಳೂರಿನ ತಂಡದ ವಿಶ್ವಾಸ ಹೆಚ್ಚಾಗಿದೆ. ಚೊಚ್ಚಲ ಟ್ರೋಫಿ ಜಯಿ ಸುವ ಆಸೆ ಹೊಂದಿರುವ ತಂಡದ ಆಶಯಕ್ಕೂ ಬಲಬಂದಿದೆ.

ಕ್ರೀಡಾಂಗಣ ಭರ್ತಿ: ಟೂರ್ನಿಯ ಆರಂಭದ ಪಂದ್ಯಗಳಿಗೆ ಕ್ರೀಡಾಂಗಣದ ಕೆಲ ಭಾಗಗಳ ಸೀಟುಗಳು ಖಾಲಿಯಾಗಿ ಉಳಿದಿದ್ದವು. ಆದರೆ ಪ್ಲೇ ಆಫ್‌ ಪಂದ್ಯಕ್ಕೆ ಕ್ರೀಡಾಂಗಣ ಭರ್ತಿಯಾಗಿತ್ತು.

ಆರಂಭದ ಕೆಲ ಲೀಗ್ ಪಂದ್ಯಗಳ ನಂತರ ಟಿಕೆಟ್‌ ಬೆಲೆಯನ್ನು ಕಡಿಮೆ ಮಾಡಲಾಗಿತ್ತು. ಆಗಿನಿಂದಲೂ ಕ್ರೀಡಾಂ ಗಣ ಭರ್ತಿಯಾಗುತ್ತಿದೆ. ಆದರೆ ಪ್ಲೇ ಆಫ್‌ ಪಂದ್ಯಗಳಿಗೆ ಟಿಕೆಟ್‌ ಬೆಲೆ ಹೆಚ್ಚಿಸ ಲಾಗಿತ್ತು. ಆದರೂ  ಅಭಿಮಾನಿಗಳ ಐಪಿಎಲ್‌ ಪ್ರೀತಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.

ಸೋಲ್ಡ್‌ ಔಟ್‌: ಚಿನ್ನಸ್ವಾಮಿ ಕ್ರೀಡಾಂ ಗಣದಲ್ಲಿ ಮೇ 29ರಂದು ನಡೆಯಲಿ ರುವ ಒಂಬತ್ತನೇ ಆವೃತ್ತಿಯ ಫೈನಲ್‌ ಪಂದ್ಯಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ.

Book My Show ಮತ್ತು ಐಪಿಎಲ್‌ನ ಅಧಿಕೃತ ವೆಬ್‌ಸೈಟ್‌ ಮೂಲಕ ಟಿಕೆಟ್‌ ಪಡೆದುಕೊಳ್ಳಲು ಅಭಿಮಾನಿಗಳಿಗೆ ಅವಕಾಶ ಕೊಡಲಾಗಿತ್ತು. ಆದರೆ ಕ್ವಾಲಿಫೈಯರ್ ಮತ್ತು ಎಲಿಮಿನೇಟ್‌ ಪಂದ್ಯ ಮುಗಿಯವು ಮೊದಲೇ ಟಿಕೆಟ್‌ಗಳು ಖಾಲಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.