ADVERTISEMENT

ಪ್ರೊ ಕಬಡ್ಡಿ: ಸ್ಟೀಲರ್ಸ್‌ಗೆ ಜಯಭೇರಿ

ಪಿಟಿಐ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಜೈಪುರ ಪಿಂಕ್ ಪ್ಯಾಂಥರ್ಸ್‌ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ಪೈಪೋಟಿ
ಜೈಪುರ ಪಿಂಕ್ ಪ್ಯಾಂಥರ್ಸ್‌ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ಪೈಪೋಟಿ   

ರಾಂಚಿ: ‘ಎ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಹರಿಯಾಣ ಸ್ಟೀಲರ್ಸ್ ತಂಡ ಗುರುವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ಎದುರು ಜಯಿಸಿತು.

ಸ್ಟೀಲರ್ಸ್‌ ಅಡಿದ 17 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು ಐದು ಪಂದ್ಯಗಳನ್ನು ಸೋತಿದೆ. 54 ಪಾಯಿಂಟ್ಸ್ ಹೊಂದಿರುವ ಈ ತಂಡದ ನಾಲ್ಕು ಪಂದ್ಯಗಳು ಟೈ ಆಗಿವೆ.

ಸ್ಟೀಲರ್ಸ್‌ 30–26 ಪಾಯಿಂಟ್ಸ್‌ಗಳಲ್ಲಿ ಪ್ಯಾಂಥರ್ಸ್‌ಗೆ ಸೋಲುಣಿಸಿದೆ. ವಜೀರ್ ಖಾನ್‌ ಹತ್ತು ಪಾಯಿಂಟ್ಸ್ ಕಲೆಹಾಕಿ, ಜಯದ ರೂವಾರಿಯಾದರು. ಆರು ರೇಡಿಂಗ್ ಪಾಯಿಂಟ್ಸ್‌ಗಳನ್ನು ಹಾಗೂ ಟ್ಯಾಕಲ್‌ನಲ್ಲಿ ಎರಡು ಬೋನಸ್‌ ಪಾಯಿಂಟ್ಸ್‌ಗಳನ್ನು ಅವರು ತಂದರು.

ADVERTISEMENT

ಸುರೇಂದರ್‌ ನಾಡಾ ಐದು ಪಾಯಿಂಟ್ಸ್ ಗಳಿಸಿದರು. ಪ್ಯಾಂಥರ್ಸ್ ತಂಡಕ್ಕೆ ತುಷಾರ್ ಪಾಟೀಲ, ಪವನ್ ಕುಮಾರ್ ಹಾಗೂ ಮಂಜೀತ್ ಚಿಲ್ಲಾರ ಆಸರೆಯಾದರು. ತುಷಾರ್ ಎಂಟು ಪಾಯಿಂಟ್ಸ್ ತಂದರು. ರೇಡಿಂಗ್‌ನಲ್ಲಿ ಐದು ಹಾಗೂ ಟ್ಯಾಕಲ್‌ನಲ್ಲಿ ಒಂದು ಪಾಯಿಂಟ್ಸ್‌ ಕಲೆಹಾಕಿದರು.

ಎರಡು ಬೋನಸ್‌ ಪಾಯಿಂಟ್ಸ್‌ಗಳು ಅವರಿಗೆ ಸಿಕ್ಕಿವೆ. ಪವನ್ ಒಟ್ಟು ಏಳು ಪಾಯಿಂಟ್ಸ್ ಗಳಿಸಿದರೆ, ಮಂಜೀತ್ ನಾಲ್ಕು ಪಾಯಿಂಟ್ಸ್ ತಂದುಕೊಟ್ಟರು.

ಮೊದಲರ್ಧದ ವೇಳೆಗೆ ಜೈಪುರ ಹಾಗೂ ಸ್ಟೀಲರ್ಸ್ ತಂಡಗಳೆರಡೂ 12–12ರಲ್ಲಿ ಸಮಬಲ ಸಾಧಿಸಿದ್ದವು. ಆದರೆ ಎರಡನೇ ಅವಧಿಯ ವೇಳೆಗೆ ಸ್ಟೀಲರ್ಸ್ ತಂಡ ಉತ್ತಮ ಆಟದಿಂದ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.