ADVERTISEMENT

ಫುಟ್‌ಬಾಲ್‌:ಕ್ವಾರ್ಟರ್‌ ಫೈನಲ್‌ಗೆ ಎಕ್ಸ್‌.ಎಲ್‌.ಆರ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST

ಬೆಂಗಳೂರು: ಅರವಿಂದ್‌ ಅವರ ಕಾಲ್ಚಳಕದಲ್ಲಿ ಅರಳಿದ ಎರಡು ಗೋಲುಗಳ ಬಲದಿಂದ ಎಕ್ಸ್‌.ಎಲ್‌.ಆರ್‌ 8 ಎಫ್‌ಸಿ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಕ್ಸ್‌.ಎಲ್‌.ಆರ್‌ ತಂಡ 3–1 ಗೋಲುಗಳಿಂದ ಸ್ಪೋರ್ಟಿಂಗ್‌ ಯೂತ್ಸ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಎಕ್ಸ್‌.ಎಲ್.ಆರ್. ತಂಡದ ಅರವಿಂದ್‌ 8 ಮತ್ತು 12ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ಗೋಪಿ 58ನೇ ನಿಮಿಷದಲ್ಲಿ ಗೋಲು ಹೊಡೆದರು.  ಸ್ಪೋರ್ಟಿಂಗ್‌ ತಂಡದ ಶಿಬಿನ್‌ 62ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ADVERTISEMENT

ಶನಿವಾರ ನಡೆಯುವ ಕ್ವಾರ್ಟರ್‌ ಫೈನಲ್‌ನಲ್ಲಿ ಎಕ್ಸ್‌.ಎಲ್‌.ಆರ್‌ ಎಫ್‌ಸಿ ತಂಡ ನವರತ್ನ ಎಫ್‌ಸಿ ವಿರುದ್ಧ ಸೆಣಸಲಿದೆ.

ಎಂಟರ ಘಟ್ಟಕ್ಕೆ ನ್ಯಾಷನಲ್ಸ್‌: ನ್ಯಾಷನಲ್ಸ್‌ ಎಫ್‌ಸಿ ತಂಡದವರು ಲೀಗ್‌ನಲ್ಲಿ ಎಂಟರ ಘಟ್ಟ ಪ್ರವೇಶಿಸಿದರು.  ಗುರುವಾರ ನಡೆದ ಪಂದ್ಯದಲ್ಲಿ ನ್ಯಾಷನಲ್ಸ್‌ ಎಫ್‌ಸಿ 2–0 ಗೋಲುಗಳಿಂದ ತಾಮರೈ ಕಣ್ಣನ್‌ ಎಫ್‌ಸಿ ವಿರುದ್ಧ ಗೆದ್ದಿತು.

ನ್ಯಾಷನಲ್ಸ್‌ ತಂಡದ ಡೊನಾಲ್‌ಸನ್‌ ಮತ್ತು ಸುನಿಲ್‌ ಅವರು ಕ್ರಮವಾಗಿ 4 ಮತ್ತು 43ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.ಎಂಟರ ಘಟ್ಟದ ಹಣಾಹಣಿಯಲ್ಲಿ ನ್ಯಾಷನಲ್ಸ್ ತಂಡ ಮಹಮ್ಮದ್‌ ಸ್ಪೋರ್ಟಿಂಗ್‌ ಎಫ್‌ಸಿ ಎದುರು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.