ADVERTISEMENT

ಫುಟ್‌ಬಾಲ್‌: ಗ್ರೀನ್‌ವುಡ್‌ ಶಾಲೆಗೆ ಜಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST

ಬೆಂಗಳೂರು: ಗ್ರೀನ್‌ವುಡ್‌ ಹೈ ಇಂಟರ್‌ನ್ಯಾಷನಲ್‌ ಶಾಲೆ ತಂಡ ಇಲ್ಲಿ ನಡೆಯುತ್ತಿರುವ ಲೀಪ್‌ ಸ್ಟಾರ್ಟ್‌ ಜೂನಿಯರ್‌ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ 2–0 ಗೋಲುಗಳಿಂದ ಡಿಪಿಎಸ್‌ ಸೌತ್‌ ತಂಡದ ವಿರುದ್ಧ ಗೆದ್ದಿದೆ.

12 ವರ್ಷದೊಳಗಿನವರ ಇತರ ಪಂದ್ಯಗಳಲ್ಲಿ ಡಿಪಿಎಸ್‌ ಸೌತ್‌ 2–0ರಲ್ಲಿ ಜಿಸಿಐಎಸ್‌ ಎದುರೂ, ಗ್ರೀನ್‌ವುಡ್‌ 6–0ರಲ್ಲಿ ಸಿಲಿಕಾನ್‌ ಸಿಟಿ ಮೇಲೂ, ಸಂಹಿತಾ 2–0ರಲ್ಲಿ ಹೋಲಿ ಸ್ಪಿರಿಟ್‌ ವಿರುದ್ಧವೂ ಗೆದ್ದವು,

10 ವರ್ಷದೊಳಗಿನವರ ವಿಭಾಗದ ಪಂದ್ಯಗಳಲ್ಲಿ ಡಿಪಿಎಸ್‌ ನಾರ್ತ್‌ 1–0 ಗೋಲಿನಿಂದ ಜಿಸಿಐಎಸ್‌ ಎದುರೂ, ಗ್ರೀನ್‌ವುಡ್‌ 9–0ರಲ್ಲಿ ಸಿಲಿಕಾನ್‌ ಸಿಟಿ ಮೇಲೂ, ಸಂಹಿತಾ 6–0ರಲ್ಲಿ ಸಿಲಿಕಾನ್‌ ಸಿಟಿ ವಿರುದ್ಧವೂ ವಿಜಯಿಯಾದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.