ADVERTISEMENT

ಬಹುಮಾನ ಮೊತ್ತದಲ್ಲಿ ಶ್ರೀಕಾಂತ್‌ಗೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 19:55 IST
Last Updated 17 ನವೆಂಬರ್ 2017, 19:55 IST
ಬಹುಮಾನ ಮೊತ್ತದಲ್ಲಿ ಶ್ರೀಕಾಂತ್‌ಗೆ ಅಗ್ರಸ್ಥಾನ
ಬಹುಮಾನ ಮೊತ್ತದಲ್ಲಿ ಶ್ರೀಕಾಂತ್‌ಗೆ ಅಗ್ರಸ್ಥಾನ   

ನವದೆಹಲಿ: ಭಾರತದ ಅಗ್ರಗಣ್ಯ ಆಟಗಾರ ಕಿದಂಬಿ ಶ್ರೀಕಾಂತ್ ಪ್ರಸಕ್ತ ವರ್ಷ ವಿಶ್ವದಲ್ಲೇ ಹೆಚ್ಚು ಬಹುಮಾನ ಮೊತ್ತ ಪಡೆದ ಬ್ಯಾಡ್ಮಿಂಟನ್‌ ಆಟಗಾರ ಎನಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಏರಿರುವ ಶ್ರೀಕಾಂತ್ 2017ರಲ್ಲಿ ಪಡೆದ ಪ್ರಶಸ್ತಿ ಮೊತ್ತ ₹ 1.54 ಕೋಟಿಗೆ ಏರಿದೆ. ಇದು ಪುರುಷರ ಸಿಂಗಲ್ಸ್‌ನಲ್ಲಿ ಆಡುವ ವಿಶ್ವದ ಇತರ ಆಟಗಾರರಿಗಿಂತ ಹೆಚ್ಚು.

ಈ ಋತುವಿನಲ್ಲಿ ನಾಲ್ಕು ಸೂಪರ್ ಸರಣಿ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಶ್ರೀಕಾಂತ್‌ ಮಲೇಷ್ಯಾದ ಆಟಗಾರ ಲೀ ಚಾಂಗ್ ವೀ ಅವರಿಗಿಂತ ಮೂರು ಪಟ್ಟು ಹೆಚ್ಚು ಬಹುಮಾನ ಮೊತ್ತ ಪಡೆದಿರುವುದು ವಿಶೇಷ. ಲೀ ಚಾಂಗ್‌ ಬಹುಮಾನ ಮೊತ್ತದಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ.

ADVERTISEMENT

‘ಈ ವರ್ಷ ನನಗೆ ಸಾಕಷ್ಟು ವಿಶೇಷವಾದ ಅನುಭವಗಳು ಆಗಿವೆ. ಸದ್ಯಕ್ಕೆ ನಾನು ಆಟದ ಮೇಲೆ ಹೆಚ್ಚು ಗಮನಹರಿಸಲಿದ್ದೇನೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆಯುವುದು ನನ್ನ ಮುಂದಿನ ಗುರಿ’ ಎಂದು ಶ್ರೀಕಾಂತ್ ಹೇಳಿದ್ದಾರೆ.

ಅನಾರೋಗ್ಯದ ಕಾರಣ ಚೀನಾ ಓಪನ್‌ನಲ್ಲಿ ಆಡದ ಶ್ರೀಕಾಂತ್‌ ಮುಂಬರುವ ಹಾಂಕಾಂಗ್ ಓಪನ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.