ADVERTISEMENT

ಬಾಕ್ಸಿಂಗ್‌: ಭಾರತಕ್ಕೆ ಮಿಶ್ರ ಫಲ

ಪಿಟಿಐ
Published 20 ನವೆಂಬರ್ 2017, 20:17 IST
Last Updated 20 ನವೆಂಬರ್ 2017, 20:17 IST

ಗುವಾಹಟಿ: ಮಹಿಳೆಯರ ಯೂತ್‌ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಮೊದಲ ದಿನ ಭಾರತ ಮಿಶ್ರ ಫಲ ಕಂಡಿದೆ. 57 ಕೆಜಿ ವಿಭಾಗದಲ್ಲಿ ಶಶಿ ಚೋಪ್ರಾ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದು 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವನಲಾಲ್‌ ರ‍್ಯಾತ್‌ಪುಯಿ ಮೊದಲ ಸುತ್ತಿನಲ್ಲೇ ಸೋತಿದ್ದಾರೆ.

ಉಜ್ಬೆಕಿಸ್ತಾನದ ಡುರ್ಡೊನಕೋನ್‌ ರಖ್‌ಮಟೋವಾ ಎದುರು ಶಶಿ ಗೆದ್ದರು. ವನಮಾಲಾ ಅವರನ್ನು ದಕ್ಷಿಣ ಕೊರಿಯಾದ ಇಮ್ ಐಜೆ ಮಣಿಸಿದರು. ಬಲ್ಕಾನ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ ನಲ್ಲಿ ಚಿನ್ನ ಗೆದ್ದಿದ್ದ ಶಶಿ ಇಲ್ಲಿ ಮುಂದಿನ ಸುತ್ತಿನಲ್ಲಿ ಚೀನಾ ಥೈಪೆಯ ಲಿನ್‌ ಲಿ ವೀ ಯಿ ಅವರನ್ನು ಎದುರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT