ADVERTISEMENT

ಬಾರ್ಡರ್– ಗಾವಸ್ಕರ್‌’ ಟ್ರೋಫಿ : ಗೆಲುವಿನ ಸನಿಹ ಭಾರತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 19:55 IST
Last Updated 27 ಮಾರ್ಚ್ 2017, 19:55 IST
ಬಾರ್ಡರ್– ಗಾವಸ್ಕರ್‌’ ಟ್ರೋಫಿ :  ಗೆಲುವಿನ ಸನಿಹ ಭಾರತ
ಬಾರ್ಡರ್– ಗಾವಸ್ಕರ್‌’ ಟ್ರೋಫಿ : ಗೆಲುವಿನ ಸನಿಹ ಭಾರತ   

ಧರ್ಮಶಾಲಾ: ಆಸ್ಟ್ರೇಲಿಯಾ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ  137 ರನ್‌ಗಳಿಗೆ ಕಟ್ಟಿ ಹಾಕಿರುವ ಭಾರತ ತಂಡ ‘ಬಾರ್ಡರ್– ಗಾವಸ್ಕರ್‌’ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯದಲ್ಲಿ ಗೆಲುವಿನ ಹೆಬ್ಬಾಗಿಲಿಗೆ ಬಂದು ನಿಂತಿದೆ.

ಜಯಕ್ಕೆ 106 ರನ್‌ಗಳ ಸುಲಭ ಗುರಿ ಪಡೆದಿರುವ ಆತಿಥೇಯ ತಂಡ ಮೂರನೇ ದಿನವಾದ ಸೋಮವಾರದ ಅಂತ್ಯಕ್ಕೆ ಆರು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 19 ರನ್ ಗಳಿಸಿದೆ. ಎರಡು ದಿನಗಳ ಆಟ ಬಾಕಿಯಿದ್ದು  87 ರನ್ ಕಲೆ ಹಾಕಬೇಕಿದೆ.

ಆಲ್‌ರೌಂಡರ್‌ ರವೀಂದ್ರ ಜಡೇಜ 63 ರನ್ ಗಳಿಸಿ ಭಾರತದ ಇನಿಂಗ್ಸ್‌ ಮುನ್ನಡೆಗೆ ಕಾರಣರಾದರು. ಜೊತೆಗೆ ಬೌಲಿಂಗ್‌ನಲ್ಲಿ ಮೂರು ವಿಕೆಟ್‌ ಕಬಳಿಸಿ ಮಿಂಚಿದರು. ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಮತ್ತು ವೇಗಿ ಉಮೇಶ್ ಯಾದವ್‌ ಕೂಡ ತಲಾ ಮೂರು ವಿಕೆಟ್‌ ಉರುಳಿಸಿ ಪ್ರವಾಸಿ ತಂಡದ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡಿದರು.

ADVERTISEMENT

ನಾಲ್ಕು ಪಂದ್ಯಗಳ ಸರಣಿ ಇದಾಗಿದ್ದು ಸದ್ಯಕ್ಕೆ ಉಭಯ ತಂಡಗಳು 1–1ರಲ್ಲಿ ಸಮಬಲ ಹೊಂದಿವೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಟ್ರೋಫಿ ಎತ್ತಿಹಿಡಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.