ADVERTISEMENT

ಬಿಲಿಯರ್ಡ್ಸ್‌: ಫೈನಲ್‌ಗೆ ಪಂಕಜ್ ಅಡ್ವಾಣಿ

ಪಿಟಿಐ
Published 23 ಮಾರ್ಚ್ 2018, 19:30 IST
Last Updated 23 ಮಾರ್ಚ್ 2018, 19:30 IST
ಬಿಲಿಯರ್ಡ್ಸ್‌: ಫೈನಲ್‌ಗೆ ಪಂಕಜ್ ಅಡ್ವಾಣಿ
ಬಿಲಿಯರ್ಡ್ಸ್‌: ಫೈನಲ್‌ಗೆ ಪಂಕಜ್ ಅಡ್ವಾಣಿ   

ಯಾಂಗೂನ್‌, ಮ್ಯಾನ್ಮಾರ್‌: ಭಾರತದ ಪಂಕಜ್ ಅಡ್ವಾಣಿ ಇಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಫೈನಲ್ ಪ್ರವೇಶಿಸಿದ್ದಾರೆ.

ಹಾಲಿ ಚಾಂಪಿಯನ್ ಪಂಕಜ್ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ 5–1ರಲ್ಲಿ ಸ್ಥಳೀಯ ಆಟಗಾರ ಅನುಗ್ ಅವರನ್ನು ಮಣಿಸಿದರು. ಬಳಿಕ ಸೆಮಿಫೈನಲ್ ಪಂದ್ಯದಲ್ಲಿ 5–1ರಲ್ಲಿ ಧ್ವಜ್ ಹರಿಯಾ ಎದುರು ಗೆದ್ದರು.

ಧ್ವಜ್ ಎದುರಿನ ಪಂದ್ಯದಲ್ಲಿ ಪಂಕಜ್‌ ಚುರುಕಿನಿಂದ ಆಡುವ ಮೂಲಕ ಗಮನ ಸೆಳೆದರು.

ADVERTISEMENT

ಆರಂಭಿಕ ಫ್ರೇಮ್‌ನಲ್ಲಿ ಎದುರಾಳಿಯನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡರು.

ಬಳಿಕ ಎದುರಾಳಿ ಆಟಗಾರನ ತಂತ್ರಗಳನ್ನು ಅರಿತು ಹಣಾಹಣಿ ನಡೆಸಿದರು.

ಗಿಲ್‌ಕ್ರಿಸ್ಟ್‌ಗೆ ಸೋಲುಣಿಸಿದ ಧ್ರುವ್‌: ಭಾರತದ ಧ್ರುವ್ ಅವರು ಸೆಮಿಫೈನಲ್ ಪಂದ್ಯದಲ್ಲಿ 5–0 ಫ್ರೇಮ್‌ಗಳಲ್ಲಿ ಸಿಂಗಪುರದ ಪೀಟರ್ ಗಿಲ್‌ಕ್ರಿಸ್ಟ್ ಎದುರು ಗೆದ್ದಿದ್ದಾರೆ.

ಒತ್ತಡಕ್ಕೆ ಒಳಗಾಗಿದ್ದ ಧ್ರುವ ಪ್ರಬಲ ಪೈಪೋಟಿ ನೀಡದೆ ಸೋತರು. ಪಂಕಜ್ ಹಾಗೂ ಧ್ರುವ ಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಕೀರತ್‌ ಭಂಡಾಲ್‌ ಕಂಚು ಗೆದ್ದಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು 0–3ರಲ್ಲಿ ಸೋತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.