ADVERTISEMENT

ಬ್ಯಾಸ್ಕೆಟ್‌ಬಾಲ್‌: ಓರಿಯನ್ಸ್‌ಗೆ ಜಯ

ಪಿಟಿಐ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST

ಬೆಂಗಳೂರು: ಅಗು ಹಾಗೂ ರಾಹುಲ್ ಅವರ ಉತ್ತಮ ಆಟದ ನೆರವಿನಿಂದ ಯಂಗ್ ಓರಿಯನ್ಸ್ ತಂಡ ಎನ್‌.ಸಿ ಪರಪ್ಪ ಸ್ಮಾರಕ ಇಲ್ಲಿ ನಡೆಯುತ್ತಿರುವ ಪುರುಷರ ರಾಜ್ಯ ‘ಎ’ ಡಿವಿಷನ್ ಲೀಗ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬುಧವಾರದ ಪಂದ್ಯದಲ್ಲಿ ಜಯ ದಾಖಲಿಸಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ  ಪಂದ್ಯದಲ್ಲಿ ಯಂಗ್ ಓರಿಯನ್ಸ್ 68–59ರಲ್ಲಿ ಎಮ್‌ಇಜಿ ತಂಡವನ್ನು ಮಣಿಸಿದೆ. ವಿರಾಮದ ವೇಳೆಗೆ ಓರಿಯನ್ಸ್‌ 27–26ರಲ್ಲಿ ಕೇವಲ ಒಂದು ಪಾಯಿಂಟ್‌ ಮುನ್ನಡೆ ಹೊಂದಿತ್ತು.

ವಿಜಯೀ ತಂಡದ ಆಗು  26 ಪಾಯಿಂಟ್ಸ್ ಕಲೆಹಾಕುವ ಮೂಲಕ ಮಿಂಚಿದರೆ, ರಾಹುಲ್ 14 ಪಾಯಿಂಟ್ಸ್‌ ತಂದಿತ್ತರು.  ಇನ್ನೊಂದು ಪಂದ್ಯದಲ್ಲಿ ಬೀಗಲ್ಸ್‌ ಕ್ಲಬ್‌ 79–38ರಲ್ಲಿ ಕೆಎಸ್‌ಪಿ ಎದುರು ಜಯದಾಖಲಿಸಿತು. ಬೀಗಲ್ಸ್ ತಂಡದ ಚೇತನ್ 34 ಹಾಗೂ ಇತಾಂಗ್‌ 15 ಪಾಯಿಂಟ್ಸ್ ಕಲೆಹಾಕಿದರು.

ADVERTISEMENT

ಅಂತಿಮ ಪಂದ್ಯದಲ್ಲಿ ಡಿವೈಇಎಸ್ ಬೆಂಗಳೂರು ತಂಡ 71–54ರಲ್ಲಿ ಐಬಿ ಬಿಸಿ ಎದುರು ಗೆದ್ದಿತು. ಡಿವೈಇಎಸ್ ತಂಡ ದ ಮುಫೀಜ್ 30 ಹಾಗೂ ಕಾರ್ತಿಕ್ ಬಾಜಿ 18 ಪಾಯಿಂಟ್ಸ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.