ADVERTISEMENT

ಭಾರತ ಅಥ್ಲೆಟಿಕ್ಸ್‌ ತಂಡದಲ್ಲಿ ರಾಜ್ಯದ ದಾನೇಶ್ವರಿಗೆ ಸ್ಥಾನ

ಪಿಟಿಐ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ನವದೆಹಲಿ: ಮುಂದಿನ ತಿಂಗಳು ಬ್ಯಾಂಕಾಕ್‌ನಲ್ಲಿ ಆಯೋಜನೆ ಯಾಗಿರುವ ಏಷ್ಯಾ ಯೂತ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ 37 ಸದಸ್ಯರನ್ನು ಒಳಗೊಂಡ ಭಾರತ ತಂಡ ಮಂಗಳ ವಾರ ಪ್ರಕಟವಾಗಿದೆ.

ರಾಷ್ಟ್ರೀಯ ಯೂತ್ ಅಥ್ಲೆಟಿಕ್ಸ್‌ನಲ್ಲಿ ಎರಡು ಪದಕಗಳನ್ನು ಜಯಿಸಿರುವ ಕರ್ನಾಟಕದ ಎ.ಟಿ. ದಾನೇಶ್ವರಿ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಲಭಿಸಿದೆ. ಏಷ್ಯನ್‌ ಕೂಟದಲ್ಲಿ ಅವರು 100 ಮೀ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಯೂತ್‌ ಅಥ್ಲೆಟಿಕ್ಸ್‌ನಲ್ಲಿ ನೀಡಿದ ಸಾಮರ್ಥ್ಯದ ಆಧಾರದ ಮೇಲೆ  ತಂಡ ಆಯ್ಕೆ ಮಾಡಲಾಗಿದೆ ಎಂದು ಭಾರತ ಅಥ್ಲೆಟಿಕ್‌ ಫೆಡರೇಷನ್ ತಿಳಿಸಿದೆ. ಏಷ್ಯನ್‌ ಚಾಂಪಿಯನ್‌ಷಿಪ್‌ ಮೇ 20ರಿಂದ 23ರ ವರೆಗೆ ನಡೆಯಲಿದೆ.

ADVERTISEMENT

ಬ್ಯಾಂಕಾಂಕ್‌ಗೆ ತೆರಳುವ ಮೊದಲು 24 ಬಾಲಕರು ಮತ್ತು 13 ಬಾಲಕಿಯರನ್ನು ಒಳಗೊಂಡ ತಂಡ ಸೋನೆಪತ್ ಮತ್ತು ಪಟಿಯಾಲದಲ್ಲಿ ಇರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ   ನಡೆಯಲಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.