ADVERTISEMENT

ಮಳೆ ಬರದಿದ್ದರೆ ಗೆಲ್ಲುತ್ತಿದ್ದೆವು: ಮುತ್ತಯ್ಯ

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST
ಮಳೆ ಬರದಿದ್ದರೆ ಗೆಲ್ಲುತ್ತಿದ್ದೆವು: ಮುತ್ತಯ್ಯ
ಮಳೆ ಬರದಿದ್ದರೆ ಗೆಲ್ಲುತ್ತಿದ್ದೆವು: ಮುತ್ತಯ್ಯ   

ಬೆಂಗಳೂರು:  ‘ಪಂದ್ಯಕ್ಕೆ ಮಳೆ ಅಡ್ಡಿಯಾಗದಿದ್ದರೆ ನಮ್ಮ ತಂಡಕ್ಕೆ ಗೆಲ್ಲುವ ಅವಕಾಶ ಇತ್ತು’ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್‌ ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.

ಬುಧವಾರದ ಎಲಿಮಿನೇಟರ್ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ  ಮೊದಲು ಬ್ಯಾಟ್ ಮಾಡಿ 7 ವಿಕೆಟ್ ನಷ್ಟಕ್ಕೆ 128 ರನ್‌ ಕಲೆಹಾಕಿತ್ತು. ಮಳೆಯ ಕಾರಣ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ 6 ಓವರ್‌ಗಳಲ್ಲಿ 48ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿತ್ತು.  ಕೆಕೆಆರ್‌ 5.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

‘ಬೆಂಗಳೂರಿನ ಅಂಗಳದಲ್ಲಿ ಈ ವರ್ಷ ಹೆಚ್ಚು ಸ್ಕೋರ್‌ ದಾಖಲಾಗಿಲ್ಲ. ಈ ನಿಟ್ಟಿನಲ್ಲಿ 130 ಕಡಿಮೆ ಮೊತ್ತವೇನು ಅಲ್ಲ.  ಪೂರ್ಣ 20 ಓವರ್ ಆಡಲು ಸಿಕ್ಕಿದ್ದರೆ ಪಂದ್ಯ ಗೆಲ್ಲುವ ಸಾಧ್ಯತೆ ಇತ್ತು’ ಎಂದು ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಟಿಯಲ್ಲಿ ಮುರಳೀಧರನ್ ಹೇಳಿದ್ದಾರೆ.

ADVERTISEMENT

‘ನಮ್ಮ ತಂಡ ಮೊದಲು ಬ್ಯಾಟ್ ಮಾಡಿದ್ದರಿಂದ ಇನ್ನೂ ಹೆಚ್ಚು ರನ್ ಕಲೆಹಾಕುವ ಅವಕಾಶ ಇತ್ತು. ಆದರೆ ಕೆಕೆಆರ್ ಬೌಲರ್‌ಗಳು ಉತ್ತಮ ಸಾಮರ್ಥ್ಯ ತೋರಿದರು. ಇದು ನಮ್ಮ ದುರಾದೃಷ್ಟ. ಮಳೆ ಬಂದಿದ್ದರಿಂದ ಯಾರನ್ನು ದೂರಲು ಸಾಧ್ಯವಿಲ್ಲ. ಈ ಋತುವಿನಲ್ಲಿ ನಮ್ಮ ತಂಡದ ಆಟ ತೃಪ್ತಿ ನೀಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.