ADVERTISEMENT

ಮಹಾರಾಷ್ಟ್ರ ಫೈಟರ್ಸ್‌ಗೆ ಪ್ರಶಸ್ತಿ

ಇಂಡಿಯನ್ ಲಗೋರಿ ಪ್ರೀಮಿಯರ್ ಲೀಗ್‌

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST
ವಿಜಯಪುರದಲ್ಲಿ ಗುರುವಾರ ರಾತ್ರಿ ಮುಗಿದ ಇಂಡಿಯನ್ ಲಗೋರಿ ಪ್ರೀಮಿಯರ್ ಲೀಗ್‌ನ ಚಾಂಪಿಯನ್‌ ಆದ ಮಹಾರಾಷ್ಟ್ರ ಫೈಟರ್ಸ್‌ ತಂಡದ ಆಟಗಾರರು ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದರು 	ಪ್ರಜಾವಾಣಿ ಚಿತ್ರ–ಸಂಜೀವ ಅಕ್ಕಿ
ವಿಜಯಪುರದಲ್ಲಿ ಗುರುವಾರ ರಾತ್ರಿ ಮುಗಿದ ಇಂಡಿಯನ್ ಲಗೋರಿ ಪ್ರೀಮಿಯರ್ ಲೀಗ್‌ನ ಚಾಂಪಿಯನ್‌ ಆದ ಮಹಾರಾಷ್ಟ್ರ ಫೈಟರ್ಸ್‌ ತಂಡದ ಆಟಗಾರರು ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದರು ಪ್ರಜಾವಾಣಿ ಚಿತ್ರ–ಸಂಜೀವ ಅಕ್ಕಿ   

ವಿಜಯಪುರ: ಮಹಾರಾಷ್ಟ್ರ ಫೈಟರ್ಸ್‌ ತಂಡ ನಗರದಲ್ಲಿ ಗುರುವಾರ ಮುಕ್ತಾಯಗೊಂಡ ಪ್ರಥಮ ಇಂಡಿಯನ್‌ ಲಗೋರಿ ಪ್ರೀಮಿಯರ್ ಲೀಗ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಡಾ.ಬಿ.ಆರ್.ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ರಾತ್ರಿ ನಡೆದ ಅಂತಿಮ ಹಣಾಹಣಿಯಲ್ಲಿ ಈ ತಂಡದವರು ಮುಂಬೈ ಲಯನ್ಸ್‌ ವಿರುದ್ಧ 51 ಪಾಯಿಂಟ್‌ಗಳ ಅಂತರದ ಜಯ ಸಾಧಿಸಿ ಆಕರ್ಷಕ ಟ್ರೋಫಿ ಹಾಗೂ ₨ 5,55,555 ನಗದನ್ನು ಜೇಬಿಗಿಳಿಸಿಕೊಂಡರು.

ಮೊದಲ ಸೆಟ್‌ನಲ್ಲಿ 0–6ರಿಂದ ಹಿನ್ನಡೆ ಅನುಭವಿಸಿದ ಮಹಾರಾಷ್ಟ್ರ ಫೈಟರ್ಸ್‌ ಮರು ಹೋರಾಟ ನಡೆಸಿತು. ನಂತರದ ಮೂರು ಸೆಟ್‌ಗಳಲ್ಲಿ 27–3, 13–3, 27–4 ಪಾಯಿಂಟ್‌ ಗಳಿಸಿ ಜಯದ ನಗೆ ಬೀರಿತು. ಇನ್ನೊಂದೆಡೆ ಲೀಗ್‌ ಹಂತದಲ್ಲಿ ಅಜೇಯ ಓಟ ಮುಂದುವರಿಸಿ ಪ್ರಶಸ್ತಿ ಗಳಿಸುವ ಫೇವರಿಟ್‌ ಎನಿಸಿದ್ದ ಮುಂಬೈ ಲಯನ್ಸ್‌ ತಂಡ ಮುಗ್ಗರಿಸಿತು. ಮಹಾರಾಷ್ಟ್ರ ಫೈಟರ್ಸ್‌ ಆಟಗಾರರ ಗುರಿಯಿಂದ ತಪ್ಪಿಸಿಕೊಳ್ಳಲು ವಿಫಲರಾದ ಆಟಗಾರರು ನಿರಂತರ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟರು. ಈ ತಂಡಕ್ಕೆ ₨ 2,22,222 ನಗದು ಲಭಿಸಿತು.

ಮಹಾರಾಷ್ಟ್ರ ಫೈಟರ್ಸ್‌ ತಂಡದ ಸೌರಭ್ ಖಡ್ ಸರಣಿಯ ಶ್ರೇಷ್ಠ ಆಟಗಾರ, ಮುಂಬೈ ಲಯನ್ಸ್‌ನ ಸ್ವಪ್ನಿಲ್‌ ಶಿರಶಾಟ್‌ ಉತ್ತರ ಎಸೆತಗಾರ ಪ್ರಶಸ್ತಿಗೆ ಭಾಜನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.