ADVERTISEMENT

ಮಾಸ್ಟರ್ಸ್ ಕೂಟ: ಚಿನ್ನ ಗೆದ್ದ 101 ವಯಸ್ಸಿನ ಅಜ್ಜಿ!

ಐಎಎನ್ಎಸ್
Published 24 ಏಪ್ರಿಲ್ 2017, 20:10 IST
Last Updated 24 ಏಪ್ರಿಲ್ 2017, 20:10 IST
ಮನ್ ಕೌರ್‌
ಮನ್ ಕೌರ್‌   

ಆಕ್ಲೆಂಡ್‌: ಸ್ಪರ್ಧೆ ನೋಡಲು ಸೇರಿದ್ದವರಿಗೆ ಆಕರ್ಷಣೆ ಎನಿಸಿದ್ದ 101 ವರ್ಷದ ಭಾರತದ ಅಜ್ಜಿ ಮನ್‌ ಕೌರ್‌ ಅವರು ಇಲ್ಲಿ ಸೋಮವಾರ ನಡೆದ ವಿಶ್ವ ಮಾಸ್ಟರ್ಸ್ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಚಂಡಿಗಡದ ಮನ್ ಕೌರ್‌ 100 ಮೀಟರ್ಸ್ ಓಟದ ಸ್ಪರ್ಧೆಯನ್ನು ಒಂದು ನಿಮಿಷ 14 ಸೆಕೆಂಡುಗಳಲ್ಲಿ ತಲುಪಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಇವರೇ ಹಿರಿಯರಾಗಿದ್ದರು.

ಈ ಅಜ್ಜಿ 200 ಮೀಟರ್ಸ್ ಓಟ, ಶಾಟ್‌ಪಟ್‌ ಮತ್ತು ಜಾವಲಿನ್ ಎಸೆತ ಸ್ಪರ್ಧೆಗಳಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಕೆನಡಾದಲ್ಲಿ ವಾಸವಾಗಿರುವ ಪುತ್ರ ಗುರುದೇವ್ ಸಿಂಗ್ ಬಳಿ ತರಬೇತಿ ಪಡೆದಿರುವ ಮನ್‌ ಕೌರ್‌ ಹಿಂದೆಯೂ ಅನೇಕ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿದ್ದರು. ಬೇರೆ ಬೇರೆ ದೇಶಗಳಲ್ಲಿ ನಡೆದ ಮಾಸ್ಟರ್ಸ್‌ ಕ್ರೀಡಾಕೂಟಗಳಲ್ಲಿ ಅವರು 20ಕ್ಕೂ ಹೆಚ್ಚು ಪದಕಗಳನ್ನು ಜಯಿಸಿದ್ದಾರೆ.

‘ನನ್ನ ಮಗ ಏನು ಮಾಡುತ್ತಾನೋ ಅದನ್ನು ಅನುಸರಿಸುತ್ತೇನೆ. ಮಗನ ಬಳಿ ನಿತ್ಯ ತರಬೇತಿ ಪಡೆಯುತ್ತೇನೆ. ಆದ್ದರಿಂದ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಮುಂದೆಯೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತೇನೆ’ ಕೌರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.