ADVERTISEMENT

ಮೂರನೇ ಸುತ್ತಿಗೆ ಸಾನಿಯಾ

ಪಿಟಿಐ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ಮೂರನೇ ಸುತ್ತಿಗೆ ಸಾನಿಯಾ
ಮೂರನೇ ಸುತ್ತಿಗೆ ಸಾನಿಯಾ   

ವುಹಾನ್‌: ಗೆಲುವಿನ ಓಟ ಮುಂದುವರಿಸಿರುವ ಭಾರತದ ಸಾನಿಯಾ ಮಿರ್ಜಾ ಮತ್ತು ಜೆಕ್‌ ಗಣರಾಜ್ಯದ ಬಾರ್ಬೊರ ಸ್ಟ್ರೈಕೋವಾ ಅವರು ಇಲ್ಲಿ ನಡೆಯುತ್ತಿರುವ ವುಹಾನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ ಡಬಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಉತ್ತಮ ಆಟವಾಡಿದ ಸಾನಿಯಾ ಮತ್ತು ಸ್ಟ್ರೈಕೋವಾ 3–6, 6–3, 10–5ರಲ್ಲಿ ಕೆನಡಾದ ಗೇಬ್ರಿಯೆಲಾ ದಬ್ರೌಸ್ಕಿ ಮತ್ತು ಸ್ಪೇನ್‌ನ ಮರಿಯಾ ಜೋಸ್‌ ಮಾರ್ಟಿನೆಜ್‌ ಸ್ಯಾಂಚೆಸ್‌ ಎದುರು ಗೆಲುವು ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.