ADVERTISEMENT

ಮೆಸ್ಸಿಗೆ ನಾಲ್ಕು ಪಂದ್ಯ ನಿಷೇಧ

ಏಜೆನ್ಸೀಸ್
Published 28 ಮಾರ್ಚ್ 2017, 19:30 IST
Last Updated 28 ಮಾರ್ಚ್ 2017, 19:30 IST
ಮೆಸ್ಸಿಗೆ ನಾಲ್ಕು ಪಂದ್ಯ ನಿಷೇಧ
ಮೆಸ್ಸಿಗೆ ನಾಲ್ಕು ಪಂದ್ಯ ನಿಷೇಧ   

ಜ್ಯೂರಿಚ್: ಪಂದ್ಯದ ವೇಳೆ ಸಹಾಯಕ ರೆಫರಿಯನ್ನು ನಿಂದಿಸಿದ್ದಕ್ಕಾಗಿ ಅರ್ಜೆಂ ಟೀನಾ ತಂಡದ ಆಟಗಾರ ಲಯೊನೆಲ್‌ ಮೆಸ್ಸಿ ಅವರ ಮೇಲೆ ಫಿಫಾ ನಾಲ್ಕು ಪಂದ್ಯಗಳ ನಿಷೇಧ ಹೇರಿದೆ.

‘ಹೋದ ಗುರುವಾರ ನಡೆದಿದ್ದ ಚಿಲಿ ವಿರುದ್ಧದ ವಿಶ್ವಕಪ್‌ ಅರ್ಹತಾ ಟೂರ್ನಿಯ ಪಂದ್ಯದ ವೇಳೆ ಮೆಸ್ಸಿ ಸಹಾಯಕ ರೆಫರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹೀಗಾಗಿ ಅವರ ಮೇಲೆ ಫಿಫಾ ಶಿಸ್ತು ಸಮಿತಿಯ ನಿಯಯಮದ ಅನ್ವಯ ನಾಲ್ಕು ಪಂದ್ಯ ನಿಷೇಧ ಮತ್ತು ದಂಡ ವಿಧಿಸಲಾಗಿದೆ’ ಎಂದು ಫಿಫಾ ತಿಳಿಸಿದೆ.

ನಿಷೇಧದ ಕಾರಣ ಮೆಸ್ಸಿ ಅವರು ಬೊಲಿವಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಅರ್ಜೆಂಟೀನಾ ತಂಡ ಆಡಿರುವ 13 ಪಂದ್ಯಗಳಿಂದ 22 ಪಾಯಿಂಟ್ಸ್‌ ಕಲೆಹಾಕಿದ್ದು ಗುಂಪಿನ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಗುಂಪಿನಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಮುಂದಿನ ವರ್ಷ  ನಡೆಯುವ ವಿಶ್ವಕಪ್‌ಗೆ ಅರ್ಹತೆ ಗಳಿಸಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.