ADVERTISEMENT

ಮೇರಿ ಕೋಮ್‌ಗೆ ಒಲಿದ ಬಂಗಾರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2014, 15:40 IST
Last Updated 1 ಅಕ್ಟೋಬರ್ 2014, 15:40 IST

ಇಂಚೆನ್‌ (ಪಿಟಿಐ): ನಿರೀಕ್ಷೆ ನಿಜವಾಯಿತು. ಅಂದುಕೊಂಡಂತೆ ಎಂ.ಸಿ.ಮೇರಿ ಕೋಮ್‌ ಅವರು ಇಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಬುಧವಾರ ಬಂಗಾರದ ಸಾಧನೆ ತೋರಿದರು.

ಸಿಯೊನ್‌ಹಾಕ್‌ ಜಿಮ್ನ್ಯಾಸಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಭರವಸೆಯ ಬಾಕ್ಸರ್‌ ಕೋಮ್‌ ಮಹಿಳೆಯರ ಫ್ಲೈ ವೇಟ್‌ (51 ಕೆ.ಜಿ.) ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಕಜಕಸ್ತಾನದ ಝಾಯಿನಾ ಶೇಕೆರ್ಬೆಕೊವಾ ಅವರನ್ನು 2–0ರಲ್ಲಿ ಸೋಲಿಸಿದರು.

ಈ ಮೂಲಕ ಐದು ಬಾರಿಯ ವಿಶ್ವಚಾಂಪಿಯನ್ ಕೋಮ್ ಅವರು ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಬಾಕ್ಸರ್‌ ಸಾಧನೆಗೆ ಪಾತ್ರರಾಗಿದ್ದಾರೆ.

ADVERTISEMENT

ಮೂರು ಮಕ್ಕಳ ತಾಯಿಯಾಗಿರುವ ಕೋಮ್‌ 2012ರ ಲಂಡನ್‌ ಒಲಿಂಪಿಕ್‌ನಲ್ಲಿ ಕಂಚಿನ ಸಾಧನೆ ತೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.