ADVERTISEMENT

ಮೇ 21ಕ್ಕೆ ವಿಶ್ವ 10 ಕೆ ಓಟ

ಪಿಟಿಐ
Published 24 ಮಾರ್ಚ್ 2017, 19:57 IST
Last Updated 24 ಮಾರ್ಚ್ 2017, 19:57 IST

ಬೆಂಗಳೂರು: ವಿಶ್ವ 10ಕೆ ಓಟದ ಸ್ಪರ್ಧೆ ಈ ಬಾರಿ ದಶಕದ ಸಂಭ್ರಮ ಆಚರಿಸಲಿದೆ.  10ನೇ ಆವೃತ್ತಿಯ ಸ್ಪರ್ಧೆ ಮೇ 21 ರಂದು ನಡೆಯಲಿದೆ.
2008ರಲ್ಲಿ ಆರಂಭವಾದ ಈ ಸ್ಪರ್ಧೆ ಅಂದಿನಿಂದಲೂ ಬೆಂಗಳೂರಿನ ಜನರನ್ನು ತನ್ನತ್ತ ಸೆಳೆದಿದೆ. ಇನ್ನಷ್ಟು ಸ್ಪರ್ಧಿಗಳನ್ನು ಸೆಳೆಯುವ ಉದ್ದೇಶದಿಂದ  ಈ ಬಾರಿ ಬಹುಮಾನ ಮೊತ್ತವನ್ನೂ ಹೆಚ್ಚಿಸಲಾಗಿದೆ.

ಈ ವರ್ಷವೂ ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಗುರುವಾರದಿಂದ ನೋಂದಣಿ ಕಾರ್ಯ ಆರಂಭವಾಗಿದ್ದು ಓಪನ್‌ 10 ಕೆ ವಿಭಾಗದಲ್ಲಿ ಹೆಸರು ನೋಂದಾಯಿಸಲು  ಏಪ್ರಿಲ್‌ 13 ಕೊನೆಯ ದಿನವಾಗಿರುತ್ತದೆ. ಇತರ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಏಪ್ರಿಲ್‌ 28ರ ಒಳಗೆ ಹೆಸರು ನೋಂದಾಯಿಸಬಹುದಾಗಿದೆ.

‘ಎಲೈಟ್ ವಿಶ್ವ 10 ಕೆ ಓಟದಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ವಿಶ್ವದ ಘಟಾನುಘಟಿ ದೂರ ಅಂತರದ ಓಟಗಾರರು ಭಾಗವಹಿಸಲಿದ್ದಾರೆ. ಓಪನ್‌ ವಿಭಾಗದಲ್ಲೂ ಸಾಕಷ್ಟು ಮಂದಿ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಆಯೋಜಕರು ತಿಳಿಸಿದ್ದಾರೆ.

ADVERTISEMENT

ಹಿರಿಯ ನಾಗರಿಕರಿಗಾಗಿ 4 ಕಿ. ಮೀ. ಓಟ, ಚಾಂಪಿಯನ್ಸ್‌ ವಿಥ್‌ ಡಿಸಬಿಲಿಟಿ  ಮತ್ತು 6 ಕಿ.ಮೀ. ಮಜಾ ರನ್‌ ಕೂಡ ಇರಲಿದ್ದು, ಪ್ರತಿ ವರ್ಷದಂತೆ ಈ ಸಲವೂ  ಕಂಠೀರವ ಕ್ರೀಡಾಂಗಣದಲ್ಲಿ ಸ್ಪರ್ಧೆ ಗಳಿಗೆ ಚಾಲನೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.