ADVERTISEMENT

ಮೈಸೂರಿನಲ್ಲಿ ಚಾಲೆಂಜರ್ಸ್‌ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2015, 19:30 IST
Last Updated 1 ಜೂನ್ 2015, 19:30 IST

ನವದೆಹಲಿ (ಪಿಟಿಐ): ಮೈಸೂರಿನಲ್ಲಿ ಜೂನ್ 14 ರಿಂದ 17ರವರೆಗೆ ಮಹಿಳೆ ಯರ ಚಾಲೆಂಜರ್ ಟ್ರೋಫಿ ಕ್ರಿಕೆಟ್‌ ಟೂರ್ನಿ ನಡೆಯಲಿದೆ.
ಸೋಮವಾರ ಇಲ್ಲಿ ನಡೆದ ಮಹಿಳಾ ಕ್ರಿಕೆಟ್ ಆಯ್ಕೆ ಸಮಿತಿ ಸಭೆಯಲ್ಲಿ ತಂಡ ಗಳನ್ನು ಪ್ರಕಟಿಸಲಾಯಿತು. ಇಂಡಿಯಾ ರೆಡ್‌ ತಂಡವನ್ನು ಸ್ಮೃತಿ ಮಂದಾನಾ, ಇಂಡಿಯಾ ಬ್ಲ್ಯೂ ತಂಡವನ್ನು ಹರ್ಮನ್‌ ಪ್ರೀತ್ ಕೌರ್, ಇಂಡಿಯಾ ಗ್ರೀನ್ ತಂಡ ವನ್ನು ದೇವಿಕಾ ವೈದ್ಯ ಮುನ್ನಡೆಸುವರು.

ಜೂನ್ 28ರಿಂದ ಬೆಂಗಳೂರಿನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು  ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಸರಣಿ ಆಡಲಿದೆ.
ತಂಡಗಳು ಇಂತಿವೆ: ಇಂಡಿಯಾ ರೆಡ್: ಸ್ಮೃತಿ ಮಂದಾನಾ (ನಾಯಕಿ), ಶಿಖಾ ಪಾಂಡೆ, ಪೂನಮ್ ರಾವುತ್, ಲತಿಕಾ ಕುಮಾರಿ, ಸ್ನೇಹಾ ಮೋರೆ, ಮಧುಸ್ಮಿತಾ ಬೆಹೆರಾ, ಆರ್. ಕಲ್ಪನಾ, ಸ್ನೇಹಾ ರಾಣಾ, ಎಸ್. ಮೇಘನಾ, ಸ್ನೇಹಲ್ ಪ್ರಧಾನ್, ಎಸ್‌. ಶುಭಲಕ್ಷ್ಮೀ, ರಾಜೇಶ್ವರಿ ಗಾಯಕವಾಡ್, ಪೂನಮ್ ಯಾದವ್.

ಇಂಡಿಯಾ ಬ್ಲೂ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಎಂ.ಡಿ. ತಿರುಷಕಾಮಿನಿ, ಪರಮಿತಾ ರಅಯ್, ವೇದಾ ಕೃಷ್ಣಮೂರ್ತಿ, ಸಾರಿಕಾ ಕೊಹ್ಲಿ, ರಕ್ಷಿತಾ ಕೆ. ಕಾಳೆಗೌಡ, ಸುಷ್ಮಾ ವರ್ಮಾ, ಅನುಜಾ ಪಾಟೀಲ, ನಿರಂಜನಾ ನಾಗರಾಜನ್, ಅನನ್ಯಾ ಉಪೇಂದ್ರನ್, ಕವಿತಾ ಪಾಟೀಲ, ಏಕತಾ ಬಿಸ್ತ್‌, ಪ್ರೀತಿ ಬೋಸ್

ಇಂಡಿಯಾ ಗ್ರೀನ್ (19 ವರ್ಷದೊಳಗಿನವರು): ದೇವಿಕಾ ವೈದ್ಯ (ನಾಯಕಿ), ದೀಪ್ತಿ ಶರ್ಮಾ, ಪ್ರಿಯಾ ಪುನಿಯಾ, ದಿವ್ಯಾ ಜ್ಞಾನಾನಂದ, ರಮ್ಯಾ ಡೊಲಿ, ಪುಷ್ಪಾ ಕಿರೇಸೂರ್, ಜೆಮಿಮಾ ರೊಡ್ರಿಗ್ಸ್‌, ಏಕತಾ ಸಿಂಗ್, ತೇಜಲ್ ಹಸಬ್ನೀಸ್, ಸೈಕಾ ಇಷ್ಕಿಯು, ಪೂಜಾ ವಸ್ತ್ರಕರ್, ಸುಶ್ರೀ ಪ್ರಧಾನ್, ತಾನಿಯಾ ಭಾಟಿಯಾ

ವೇಳಾಪಟ್ಟಿ
*ಇಂಡಿಯಾ ಬ್ಲೂ ವಿರುದ್ಧ ಇಂಡಿಯಾ ರೆಡ್ (ಜೂನ್‌ 14)

*ಇಂಡಿಯಾ ಬ್ಲೂ ವಿರುದ್ಧ ಇಂಡಿಯಾ ಗ್ರೀನ್ (15)

*ಇಂಡಿಯಾ ರೆಡ್ ವಿರುದ್ಧ ಇಂಡಿಯಾ ಗ್ರೀನ್ (16)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT