ADVERTISEMENT

ರೈಲ್ವೆ ತಂಡದ ಹಳಿ ತಪ್ಪಿಸಿದ ಸಿಕ್ಯೂಎಎಲ್‌

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST

ಹೊಸನಗರ: ಮೊದಲ ಸೆಟ್‌ ಸೋತ ನಂತರ ಚೇತರಿಸಿಕೊಂಡ ಬೆಂಗಳೂರಿನ ಕಂಟ್ರೋಲರೇಟ್‌ ಕ್ವಾಲಿಟಿ ಅಶ್ಯೂರೆನ್ಸ್‌ (ಸಿಕ್ಯೂಎಎಲ್‌) ತಂಡ, ‘ಕರ್ನಾಟಕ ವಾಲಿ ಲೀಗ್‌ 2017’ ಮೂರನೇ ಹಂತದ ಪಂದ್ಯಾವಳಿಯ ಸೆಮಿಫೈನಲ್‌ ನಲ್ಲಿ ಶನಿವಾರ ಹುಬ್ಬಳ್ಳಿಯ ಸೌತ್‌ ವೆಸ್ಟರ್ನ್‌ ರೈಲ್ವೆ ತಂಡವನ್ನು  ಸೋಲಿಸಿ ಫೈನಲ್‌ ತಲುಪಿತು.

ಪಟ್ಟಣದ ಜಿಮ್ಮಿ ಜಾರ್ಜ್‌ ವಾಲಿ ಬಾಲ್‌ ಕ್ಲಬ್‌ ಆಶ್ರಯದಲ್ಲಿ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಸಿಕ್ಯೂಎಎಲ್‌ 17–25, 25–20, 25–22, 29–27ರಲ್ಲಿ ರೈಲ್ವೆ ತಂಡವನ್ನು 3–1 ಸೆಟ್‌ಗಳ ಅಂತರದಲ್ಲಿ ಸೋಲಿಸಿತು.

ಸಿಕ್ಯೂಎಎಲ್‌ ಭಾನುವಾರ ನಡೆ ಯುವ ಫೈನಲ್‌ನಲ್ಲಿ ಬಿಎಸ್‌ಎನ್‌ಎಲ್‌– ಪೋಸ್ಟಲ್‌ ತಂಡಗಳ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದೆ.
ಇದಕ್ಕೆ ಮೊದಲು ಸಿಕ್ಯೂಎಎಲ್‌ ಮತ್ತು ಬಿಎಸ್‌ಎನ್‌ಎಲ್‌ ತಂಡಗಳು ಶುಕ್ರವಾರ ‘ಬಿ’ ಗುಂಪಿನಿಂದ ಸೆಮಿ ಫೈನಲ್‌ಗೆ ಮುನ್ನಡೆದಿದ್ದವು.

ಅಂತಿಮ ಲೀಗ್‌ ಪಂದ್ಯಗಳಲ್ಲಿ ಸಿಕ್ಯೂಎಎಲ್‌ ತಂಡ 25–17, 25–21, 17–25, 25–22ರಲ್ಲಿ ಕರ್ನಾಟಕ ಸ್ಟೇಟ್‌ ಪೊಲೀಸ್‌ ತಂಡವನ್ನು ಸೋಲಿಸಿದರೆ, ಬಿಎಸ್‌ಎಲ್‌ ತಂಡ 25–23, 25–16, 25–27, 27–25ರಲ್ಲಿ ಹೊಯ್ಸಳ ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.