ADVERTISEMENT

ಲಯನ್ಸ್‌ ತಂಡಕ್ಕೆ ಇರ್ಫಾನ್‌

ಪಿಟಿಐ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ನವದೆಹಲಿ : ಭಾರತ ತಂಡದ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅವರು ಐಪಿಎಲ್‌ ಹತ್ತನೇ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ಗುಜರಾತ್‌ ಲಯನ್ಸ್‌ ತಂಡದ ಪರ ಆಡಲಿದ್ದಾರೆ.

ವೆಸ್ಟ್‌ ಇಂಡೀಸ್‌ ತಂಡದ ಆಲ್‌ ರೌಂಡರ್ ಡ್ವೇನ್‌ ಬ್ರಾವೊ ಗಾಯ ಗೊಂಡಿದ್ದು ಟೂರ್ನಿಗೆ ಅಲಭ್ಯರಾಗಿ ದ್ದಾರೆ. ಅವರ ಬದಲಿಗೆ ಗುಜರಾತ್‌ ಫ್ರಾಂಚೈಸ್‌ ಮಂಗಳವಾರ ಇರ್ಫಾನ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಈ ಬಾರಿಯ ಆಟಗಾರರ ಹರಾಜಿನಲ್ಲಿ ಇರ್ಫಾನ್‌ ಅವರಿಗೆ ₹ 50 ಲಕ್ಷ ಮೂಲ ಬೆಲೆ ನಿಗದಿ ಮಾಡಲಾಗಿತ್ತು. ಎರಡು ಬಾರಿ ಅವರ ಹೆಸರು ಹರಾಜಿಗೆ ಬಂದರೂ ಯಾವ ಫ್ರಾಂಚೈಸ್‌ ಕೂಡ  ಖರೀದಿಸಲು ಮನಸ್ಸು ಮಾಡಿರಲಿಲ್ಲ.

ADVERTISEMENT

ಒಟ್ಟು 102 ಐಪಿಎಲ್‌ ಪಂದ್ಯಗಳನ್ನು ಆಡಿರುವ ಇರ್ಫಾನ್‌ 1137ರನ್‌ ಗಳಿ ಸಿದ್ದು 80 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಅವರು ಈ ಹಿಂದೆ ಕಿಂಗ್ಸ್‌ ಇಲೆವನ್‌ ಪಂಜಾಬ್‌, ಡೆಲ್ಲಿ ಡೇರ್‌ಡೆವಿಲ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡಗಳಲ್ಲಿ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.