ADVERTISEMENT

ವಿಜಯಾ ಬ್ಯಾಂಕ್ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST

ಬೆಂಗಳೂರು: ಅನಿಲ್ ಕುಮಾರ್‌ ಹಾಗೂ ಕಾರ್ತಿಕ್ ಅವರ ಉತ್ತಮ ಆಟದ ನೆರವಿನಿಂದ ವಿಜಯಾ ಬ್ಯಾಂಕ್ ತಂಡ ಎನ್‌.ಸಿ ಪರಪ್ಪ ಸ್ಮಾರಕ ಇಲ್ಲಿ ನಡೆಯುತ್ತಿರುವ ‘ಎ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌ ಲೀಗ್‌ನಲ್ಲಿ ಮಂಗಳವಾರ ಜಯದಾಖಲಿಸಿದೆ.

ವಿಜಯಾ ಬ್ಯಾಂಕ್‌ 70–52 ಪಾಯಿಂಟ್ಸ್‌ಗಳಿಂದ ಡಿವೈಇಎಸ್‌ ಬೆಂಗಳೂರು ತಂಡವನ್ನು ಮಣಿಸಿತು. ವಿಜಯೀ ತಂಡದ ಅನಿಲ್ ಕುಮಾರ್‌ 17 ಹಾಗೂ ಕಾರ್ತಿಕ್ 14 ಪಾಯಿಂಟ್ಸ್‌ ಕಲೆಹಾಕಿದರು.

ದಿನದ ಇತರ ಪಂದ್ಯಗಳಲ್ಲಿ ಬಿಎಸ್‌ಎನ್‌ಎಲ್‌ 58–35ರಲ್ಲಿ ಎನ್‌ಜಿವಿ ಮೇಲೂ, ಎಮ್‌ಇಜಿ 64–54ರಲ್ಲಿ ಬೀಗಲ್ಸ್ ವಿರುದ್ಧವೂ, ಯಂಗ್ ಓರಿಯನ್ಸ್‌ 40–17ರಲ್ಲಿ ಕೆಎಸ್‌ಪಿ ಎದುರೂ, ಎಎಸ್‌ಸಿ 54–32ರಲ್ಲಿ ಜೆಎಸ್‌ಸಿ ವಿರುದ್ಧವೂ, ಬ್ಲೂಸ್‌ 64–51ರಲ್ಲಿ ಕೋರಮಂಗಲ ಕ್ಲಬ್‌ ಎದುರೂ ಜಯಗಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.