ADVERTISEMENT

‘ವಿರಾಟ್ ಕೊಹ್ಲಿ ಸಾಮರ್ಥ್ಯ ನಿರ್ಲಕ್ಷಿಸಿದವರಿಗೆ ಪಶ್ಚಾತ್ತಾಪ’

ಪಿಟಿಐ
Published 26 ಮೇ 2017, 19:30 IST
Last Updated 26 ಮೇ 2017, 19:30 IST

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಹತ್ತನೇ ಆವೃತ್ತಿ ಯಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಮಿಂಚಿರ ಲಿಲ್ಲ. ಆದ್ದರಿಂದ ಅವರು ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಯಲ್ಲಿಯೂ ವೈಫಲ್ಯ ಅನುಭವಿಸು ತ್ತಾರೆಂದು ತಿಳಿದು ಕೊಳ್ಳುವ ಎದುರಾಳಿಗಳು ದುಬಾರಿ ಬೆಲೆ ತೆರಬೇಕಾಗ ಬಹುದು ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕ್ ಹಸ್ಸಿ ಹೇಳಿದ್ದಾರೆ.

ಶುಕ್ರವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ವಿರಾಟ್ ಅವರು ಉನ್ನತ ದರ್ಜೆಯ ಆಟಗಾರ. ಈಚೆಗೆ ಕೆಲವು ಪಂದ್ಯಗಳಲ್ಲಿ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿರ ಬಹುದು. ಆದರೆ, ಇಂಗ್ಲೆಂಡ್‌ನಲ್ಲಿ ಅವರು ಮಿಂಚುವ ಆತ್ಮವಿಶ್ವಾಸದಲ್ಲಿ ದ್ದಾರೆ. ಆದ್ದರಿಂದ ಅವರನ್ನು ಹಗುರ ವಾಗಿ ಪರಿಗಣಿಸುವಂತಿಲ್ಲ’ ಎಂದರು.

‘ಈ ಟೂರ್ನಿಯು ನಡೆಯುತ್ತಿರುವ ವಾತಾವರಣ ಬೇರೆಯೇ ಇದೆ. ಸಾಕಷ್ಟು ಉತ್ತಮ ಆಟಗಾರರು ಕಣದಲ್ಲಿದ್ದಾರೆ. ಪೈಪೋಟಿಯು ಬಹಳಷ್ಟಿದೆ. ಟೂರ್ನಿ ಯಲ್ಲಿ ಉತ್ತಮ ಆರಂಭ ಪಡೆಯುವ ತಂಡವು ಯಶಸ್ಸು ಸಾಧಿಸುತ್ತದೆ’ ಎಂದರು. ‘ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇ ಲಿಯಾ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಇದೆ.  ಉತ್ತಮ ಆಟಗಾರರು ತಂಡದಲ್ಲಿದ್ದಾರೆ. 

ADVERTISEMENT

ಬಹುತೇಕ ಅಟ ಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅದರಲ್ಲಿ ನಾಯಕ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಪ್ರಮುಖರು. ತಂಡದ ಎಲ್ಲ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಯಶಸ್ಸು ಗಳಿಸುತ್ತಾರೆ. ಆದರೆ ಬಹಳ ತುರುಸಿನ ಸ್ಪರ್ಧೆ ಇರುವುದರಿಂದ ಫೈನಲ್ ಪ್ರವೇಶಿಸುವ ತಂಡಗಳನ್ನು ಈಗಲೇ ಊಹಿಸುವುದು ಕಷ್ಟ’ ಎಂದು ಹಸ್ಸಿ ಅಭಿಪ್ರಾಯಪಟ್ಟರು.

‘ಟೂರ್ನಿಯ ಫೈನಲ್ ಪಂದ್ಯವು ಆ್ಯಶಸ್ ಹಣಾಹಣಿ ಆಗಬಹುದು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡ ಗಳು ಪ್ರಶಸ್ತಿಗೆ ಸೆಣಸುವ ಎಲ್ಲ ಸಾಧ್ಯ ತೆಗಳೂ ಇವೆ. ಒಂದೊಮ್ಮೆ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್‌ನಲ್ಲಿ ಮುಖಾ ಮುಖಿಯಾದರೆ ಒಳ್ಳೆಯದೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.