ADVERTISEMENT

ವಿಶ್ವಕಪ್‌ಗಿಂತ ಚಾಂಪಿಯನ್ಸ್ ಟ್ರೋಫಿ ಕಠಿಣ

ಟೂರ್ನಿಗೆ ಹೊರಡುವ ಮುನ್ನ ವಿರಾಟ್‌ ಕೊಹ್ಲಿ ಅಭಿಮತ

ಪಿಟಿಐ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಮುಂಬೈನಲ್ಲಿ ನಡೆದ ‘ಸಚಿನ್‌ ಎ ಬಿಲಿಯನ್‌ ಡ್ರೀಮ್ಸ್‌’ ಚಿತ್ರದ ವಿಶೇಷ ಪ್ರದರ್ಶನದ ವೇಳೆ (ಎಡದಿಂದ) ಸಚಿನ್‌ ಅವರ ಪತ್ನಿ ಅಂಜಲಿ, ನಟಿ ಅನುಷ್ಕಾ ಶರ್ಮಾ, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಸಚಿನ್‌ ತೆಂಡೂಲ್ಕರ್‌ ಅವರು ಒಟ್ಟಾಗಿ ಕಾಣಿಸಿಕೊಂಡರು ಪಿಟಿಐ ಚಿತ್ರ
ಮುಂಬೈನಲ್ಲಿ ನಡೆದ ‘ಸಚಿನ್‌ ಎ ಬಿಲಿಯನ್‌ ಡ್ರೀಮ್ಸ್‌’ ಚಿತ್ರದ ವಿಶೇಷ ಪ್ರದರ್ಶನದ ವೇಳೆ (ಎಡದಿಂದ) ಸಚಿನ್‌ ಅವರ ಪತ್ನಿ ಅಂಜಲಿ, ನಟಿ ಅನುಷ್ಕಾ ಶರ್ಮಾ, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಸಚಿನ್‌ ತೆಂಡೂಲ್ಕರ್‌ ಅವರು ಒಟ್ಟಾಗಿ ಕಾಣಿಸಿಕೊಂಡರು ಪಿಟಿಐ ಚಿತ್ರ   

ಮುಂಬೈ : ‘ವಿಶ್ವಕಪ್‌ ಕ್ರಿಕೆಟ್‌ ಗಿಂತಲೂ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಕಠಿಣ; ಹೆಚ್ಚು ಸವಾಲಿನದ್ದು...’ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಡಿದ ಮಾತು ಇದು. ಇಂಗ್ಲೆಂಡ್‌ ನಲ್ಲಿ ಜೂನ್‌ ಒಂದರಂದು ಆರಂಭ ವಾಗುವ ಟೂರ್ನಿಗೆ ಭಾರತ ತಂಡ ಹೊರಡುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಮಾತನಾಡಿದರು.

‘ವಿಶ್ವದ ಪ್ರಮುಖ ಎಂಟು ತಂಡಗಳು ಪಾಲ್ಗೊಳ್ಳುವ ಟೂರ್ನಿಯಲ್ಲಿ ಪ್ರತಿ ಹಂತವೂ ಸೂಕ್ಷ್ಮ. ಎಡವಿದರೆ ಮುಂದಿನ ಹಾದಿ ಕಠಿಣ ಎಂಬ ಎಚ್ಚರಿಕೆಯ ಗಂಟೆ ಸದಾ ಮೊಳಗುತ್ತಿರುತ್ತದೆ’ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.

‘ವಿಶ್ವಕಪ್ ಕ್ರಿಕೆಟ್‌ನಲ್ಲಿ ಯಾವುದೇ ತಂಡ ಲಯ ಕಂಡುಕೊಳ್ಳಲು ಸಮಯಾ ವಕಾಶ ಇರುತ್ತದೆ. ಲೀಗ್ ಹಂತದಲ್ಲಿ ಎಡವಿದರೂ ಚೇತರಿಸಿಕೊಳ್ಳಬಹುದು. ಆದರೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆರಂಭದಿಂದಲೇ ಎಚ್ಚರಿಕೆಯಿಂದ ಆಡ ಬೇಕಾಗುತ್ತದೆ’ ಎಂದರು. ಹಾಲಿ ಚಾಂಪಿಯನ್ನರು ಎಂದು ಬೀಗುತ್ತ ತಂಡ ಇಂಗ್ಲೆಂಡ್‌ಗೆ ಹೋಗು ತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಕೊಹ್ಲಿ ‘ನಾವು ಕ್ರಿಕೆಟ್‌ನ ರಸನಿಮಿಷಗಳನ್ನು ಸವಿಯಲು ಹೋಗುತ್ತಿದ್ದೇವೆ.

ADVERTISEMENT

ಕಳೆದ ಬಾರಿಯೂ (2013) ಇದೇ ಮನೋ ಭಾವದಿಂದ ಹೋಗಿ ಪ್ರಶಸ್ತಿ ಗೆದ್ದಿದ್ದೆವು. ಅನುಭವಿ ಆಟಗಾರರಾದ ಮಹೇಂದ್ರ ಸಿಂಗ್ ದೋನಿ ಮತ್ತು ಯುವರಾಜ್ ಸಿಂಗ್ ಅವರಂಥ ಆಟಗಾರರಿಗೆ ಮುಕ್ತ ವಾಗಿ ಆಡಲು ಅವಕಾಶ ನೀಡಿದರೆ ತಂಡ ಸುಲಭವಾಗಿ ಪಂದ್ಯಗಳನ್ನು ಗೆಲ್ಲಬಹುದು’ ಎಂದು ವಿರಾಟ್ ಅಭಿಪ್ರಾಯಪಟ್ಟರು.

‘2013ರ ಟೂರ್ನಿಯ ಎಲ್ಲ ಪಂದ್ಯಗಳಲ್ಲೂ ಶಿಖರ್ ಧವನ್‌ ಮತ್ತು ರೋಹಿತ್ ಶರ್ಮಾ ಅವರ ಮೊದಲ ವಿಕೆಟ್ ಜೊತೆಯಾಟ ಗಮನ ಸೆಳೆದಿತ್ತು. ಬೌಲರ್‌ಗಳು ಕೂಡ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದರು. ಫೀಲ್ಡಿಂಗ್‌ನಲ್ಲಿ  ಅಪ್ರತಿಮ ಸಾಧನೆ ಮಾಡಿದ್ದೇವೆ. ಅದೇ ರೀತಿಯಲ್ಲಿ ಈ ಬಾರಿಯೂ ಆಡುವುದು ನಮ್ಮ ಆಸೆ’ ಎಂದು ಕೊಹ್ಲಿ ನುಡಿದರು.

ಪಾಕಿಸ್ತಾನ ವಿರುದ್ಧದ ಪಂದ್ಯ ವಿಶೇಷವಲ್ಲ: ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸಂಬಂಧ ಕೆಟ್ಟಿರುವ ಇಂದಿನ ಪರಿಸ್ಥಿತಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಹೇಗೆ ಕಾಣು ತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ ‘ರಾಜಕೀಯ ಪರಿಸ್ಥಿತಿಗೂ ಕ್ರಿಕೆಟ್‌ಗೂ ಯಾವುದೇ ಸಂಬಂಧವಿಲ್ಲ; ಆದ್ದರಿಂದ ಪಾಕಿಸ್ತಾನ ವಿರುದ್ಧದ ಪಂದ್ಯ ವಿಶೇಷವಲ್ಲ’ ಎಂದು ಕೊಹ್ಲಿ ಹೇಳಿದರು.

‘ಭಾರತ ಮತ್ತು ಪಾಕಿಸ್ತಾನ ನಡು ವಿನ ಪಂದ್ಯ ಕ್ರಿಕೆಟ್ ಪ್ರೇಮಿಗಳಿಗೆ ಸಂಬಂ ಧಿಸಿ ವಿಶೇಷವಾಗಿರಬಹುದು. ಆದರೆ ಆಟಗಾರರಾಗಿ ನಾವು ಆ ಪಂದ್ಯವನ್ನು  ಇತರ ಪಂದ್ಯಗಳಂತೆಯೇ ಕಾಣುತ್ತೇವೆ’ ಎಂದು ಅವರು ವಿವರಿಸಿದರು.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಜೂನ್‌ ನಾಲ್ಕ ರಂದು ಭಾರತ, ಪಾಕಿಸ್ತಾನವನ್ನು ಎದು ರಿಸಲಿದೆ. 50 ಓವರ್‌ಗಳ ಮತ್ತು ಟ್ವೆಂಟಿ–20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಒಮ್ಮೆಯೂ ಸೋಲದ ಭಾರತ ಚಾಂಪಿ ಯನ್ಸ್ ಟ್ರೋಫಿಯಲ್ಲಿ ಎರಡು ಬಾರಿ ಸೋತಿದೆ. ಒಮ್ಮೆ ಮಾತ್ರ ಗೆದ್ದಿದೆ.

ಕೊಹ್ಲಿ ಕುರಿತ ಪುಸ್ತಕ ಸಿದ್ಧ
ನವದೆಹಲಿ (ಪಿಟಿಐ):  ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಬದುಕಿನ ಕುರಿತ ‘ವಿನ್ನಿಂಗ್ ಲೈಕ್ ವಿರಾಟ್‌; ಥಿಂಕ್‌ ಅಂಡ್ ಸಕ್ಸೀಡ್‌ ಲೈಕ್‌ ಕೊಹ್ಲಿ’ ಪುಸ್ತಕ ಸಿದ್ಧಗೊಂಡಿದೆ. ಅಭಿರೂಪ್ ಭಟ್ಟಾಚಾರ್ಯ ಬರೆ ದಿರುವ ಪುಸ್ತಕದಲ್ಲಿ ವಿರಾಟ್ ಕೊಹ್ಲಿ ಅವರ ಸಾಧನೆಗೆ ಕಾರಣ ವಾದ ಗುಟ್ಟು ಬಿಚ್ಚಿಡಲಾಗಿದೆ. ಬದುಕಿನ ಬಗ್ಗೆ ಅವರ ದೃಷ್ಟಿ ಕೋನದ ವಿವರವೂ ಇದೆ.

‘ಕೊಹ್ಲಿ ಅವರನ್ನು ಆಟಗಾರನಾಗಿ ಮತ್ತು ವೈಯಕ್ತಿಕವಾಗಿ ನೋಡಿ ದಾಗ ಕೆಲವು ವಿಶೇಷ ಗುಣಗಳು ಗಮನ ಸೆಳೆಯುತ್ತವೆ. ನಾಯಕತ್ವದ ಜವಾಬ್ದಾರಿಯ ಸಂದರ್ಭದಲ್ಲಿಯೂ, ಕೆಲವೊಮ್ಮೆ ಒತ್ತಡದಲ್ಲೂ ಅವರು ನಿರಾಳ ವಾಗಿ ನಡೆದುಕೊಳ್ಳುತ್ತಿದ್ದ ಪರಿ, ಪ್ರತಿ ಪಂದ್ಯವನ್ನೂ ಗೆಲ್ಲಬೇಕೆಂಬ ಛಲ ಇತ್ಯಾದಿ ಗುಣಗಳು ಅವ ರನ್ನು ಶ್ರೇಷ್ಠ ಕ್ರಿಕೆಟಿಗನನ್ನಾಗಿಸಿವೆ’ ಎಂದು ಅಭಿರೂಪ್‌ ತಮ್ಮ ಕೃತಿಯಲ್ಲಿ ಬರೆದಿದ್ದಾರೆ.

‘ಸಚಿನ್ ತೆಂಡೂಲ್ಕರ್ ನಂತರ ಹೊಸ ತಲೆಮಾರು ಟಿ.ವಿ ಪರದೆ ಮುಂದೆ ಕುಳಿತುಕೊಳ್ಳುವಂತೆ ಪ್ರೇರೇಪಿಸಿದ್ದರಲ್ಲಿ ವಿರಾಟ್ ಪಾತ್ರ ಮಹತ್ವದ್ದು. ಅವರು ಕ್ರಿಕೆಟ್‌ನ ಹೊಸ ದಂತಕತೆಯಾಗಿ ಬೆಳೆಯು ತ್ತಿದ್ದಾರೆ’ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
128 ಪುಟಗಳ ಪುಸ್ತಕವನ್ನು ರೂಪಾ ಪಬ್ಲಿಕೇಷನ್ಸ್‌ ಪ್ರಕಟಿಸಿದ್ದು ಬೆಲೆ ₹ 199.

ಕೊಹ್ಲಿ ಕುರಿತ ಪುಸ್ತಕ ಸಿದ್ಧ
ನವದೆಹಲಿ:  ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಬದುಕಿನ ಕುರಿತ ‘ವಿನ್ನಿಂಗ್ ಲೈಕ್ ವಿರಾಟ್‌; ಥಿಂಕ್‌ ಅಂಡ್ ಸಕ್ಸೀಡ್‌ ಲೈಕ್‌ ಕೊಹ್ಲಿ’ ಪುಸ್ತಕ ಸಿದ್ಧಗೊಂಡಿದೆ. ಅಭಿರೂಪ್ ಭಟ್ಟಾಚಾರ್ಯ ಬರೆ ದಿರುವ ಪುಸ್ತಕದಲ್ಲಿ ವಿರಾಟ್ ಕೊಹ್ಲಿ ಅವರ ಸಾಧನೆಗೆ ಕಾರಣ ವಾದ ಗುಟ್ಟು ಬಿಚ್ಚಿಡಲಾಗಿದೆ. ಬದುಕಿನ ಬಗ್ಗೆ ಅವರ ದೃಷ್ಟಿ ಕೋನದ ವಿವರವೂ ಇದೆ.

‘ಕೊಹ್ಲಿ ಅವರನ್ನು ಆಟಗಾರನಾಗಿ ಮತ್ತು ವೈಯಕ್ತಿಕವಾಗಿ ನೋಡಿ ದಾಗ ಕೆಲವು ವಿಶೇಷ ಗುಣಗಳು ಗಮನ ಸೆಳೆಯುತ್ತವೆ. ನಾಯಕತ್ವದ ಜವಾಬ್ದಾರಿಯ ಸಂದರ್ಭದಲ್ಲಿಯೂ, ಕೆಲವೊಮ್ಮೆ ಒತ್ತಡದಲ್ಲೂ ಅವರು ನಿರಾಳ ವಾಗಿ ನಡೆದುಕೊಳ್ಳುತ್ತಿದ್ದ ಪರಿ, ಪ್ರತಿ ಪಂದ್ಯವನ್ನೂ ಗೆಲ್ಲಬೇಕೆಂಬ ಛಲ ಇತ್ಯಾದಿ ಗುಣಗಳು ಅವ ರನ್ನು ಶ್ರೇಷ್ಠ ಕ್ರಿಕೆಟಿಗನನ್ನಾಗಿಸಿವೆ’ ಎಂದು ಅಭಿರೂಪ್‌ ತಮ್ಮ ಕೃತಿಯಲ್ಲಿ ಬರೆದಿದ್ದಾರೆ. ‘ಸಚಿನ್ ತೆಂಡೂಲ್ಕರ್ ನಂತರ ಹೊಸ ತಲೆಮಾರು ಟಿ.ವಿ ಪರದೆ ಮುಂದೆ ಕುಳಿತುಕೊಳ್ಳುವಂತೆ ಪ್ರೇರೇಪಿಸಿದ್ದರಲ್ಲಿ ವಿರಾಟ್ ಪಾತ್ರ ಮಹತ್ವದ್ದು. ಅವರು ಕ್ರಿಕೆಟ್‌ನ ಹೊಸ ದಂತಕತೆಯಾಗಿ ಬೆಳೆಯು ತ್ತಿದ್ದಾರೆ’ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
128 ಪುಟಗಳ ಪುಸ್ತಕವನ್ನು ರೂಪಾ ಪಬ್ಲಿಕೇಷನ್ಸ್‌ ಪ್ರಕಟಿಸಿದ್ದು ಬೆಲೆ ₹ 199.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.