ADVERTISEMENT

ವಿಶ್ವಕಪ್‌ಗೆ ಅರ್ಹತೆ ಗಳಿಸಿದ ವೆಸ್ಟ್ ಇಂಡೀಸ್‌

ಏಜೆನ್ಸೀಸ್
Published 21 ಮಾರ್ಚ್ 2018, 19:57 IST
Last Updated 21 ಮಾರ್ಚ್ 2018, 19:57 IST

ಹರಾರೆ (ಎಎಫ್‌ಪಿ): ವೆಸ್ಟ್ ಇಂಡೀಸ್ ತಂಡ ಮುಂದಿ ವರ್ಷ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿತು. ಬುಧವಾರ ಇಲ್ಲಿ ನಡೆದ ರೋಚಕ ಪಂದ್ಯದಲ್ಲಿ ಈ ತಂಡ ಸ್ಕಾಟ್ಲೆಂಡ್ ವಿರುದ್ಧ ಐದು ರನ್‌ಗಳ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಗೆದ್ದರೆ ಸ್ಕಾಟ್ಲೆಂಟ್‌ ವಿಶ್ವಕಪ್ ಪ್ರವೇಶಿಸುವ ಭರವಸೆ ಉಳಿಸಿಕೊಳ್ಳಬಹುದಾಗಿತ್ತು. ಎರಡು ಬಾರಿ ವಿಶ್ವಕಪ್‌ ಪ್ರಶಸ್ತಿ ಗೆದ್ದಿರುವ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿ 198 ರನ್‌ಗಳಿಗೆ ಕುಸಿಯಿತು. ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್‌ ಐದು ವಿಕೆಟ್‌ಗಳಿಗೆ 125 ರನ್ ಗಳಿಸಿದ್ದಾಗ ಮಳೆ ಸುರಿದ ಕಾರಣ ಡಕ್ವರ್ಥ್ ಲೂಯಿಸ್ ನಿಯಮದಡಿ ವೆಸ್ಟ್ ಇಂಡೀಸ್‌ ವಿಜಯಿ ತಂಡ ಎಂದು ಘೋಷಿಸಲಾಯಿತು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್ ಇಂಡೀಸ್‌: 48.4 ಓವರ್‌ಗಳಲ್ಲಿ 198ಕ್ಕೆ ಆಲೌಟ್‌ (ಲ್ಯೂವಿಸ್‌ 66, ಸ್ಯಾಮ್ಯುವೆಲ್ಸ್‌ 51; ಷರೀಫ್‌ 27ಕ್ಕೆ3, ವ್ಹೀಲ್‌ 34ಕ್ಕೆ3); ಸ್ಕಾಟ್ಲೆಂಡ್‌: 35.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 125 (ಬೆರಿಂಗ್ಟನ್‌ 33, ಮುನ್ಶಿ 32; ಕೆಮರ್ ರೋಚ್‌ 20ಕ್ಕೆ2, ಆ್ಯಶ್ಲೆ ನರ್ಸೆ 35ಕ್ಕೆ2). ಫಲಿತಾಂಶ: ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ವೆಸ್ಟ್ ಇಂಡೀಸ್‌ಗೆ 5 ರನ್ ಜಯ.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.