ADVERTISEMENT

ವಿಶ್ವ ಟೂರ್ನಿಗೆ ವಿಂಡೀಸ್ ಅನುಮಾನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST

ಕಿಂಗ್‌ಸ್ಟನ್‌ (ಪಿಟಿಐ): ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಮತ್ತು ಆಟಗಾರರ ನಡುವಿನ ಬಿಕ್ಕಟ್ಟು ಮತ್ತೆ ಉದ್ಭವ ವಾಗಿದ್ದು ವಿಂಡೀಸ್ ತಂಡ  ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.

‘ಆಟಗಾರರ ಜೊತೆಗಿನ ಮೊದಲಿನ ಗುತ್ತಿಗೆ ಒಪ್ಪಂದದಂತೆ ವೇತನ ನೀಡಲಾ ಗುವುದು. ಇದರಲ್ಲಿ ಯಾವುದೇ ಬದ ಲಾವಣೆ ಮಾಡಲು ಸಾಧ್ಯವಿಲ್ಲ. ವಿಶ್ವ ಟೂರ್ನಿಯಲ್ಲಿ ಆಡುವ ಬಗ್ಗೆ ಮೊದಲು ನಿಮ್ಮ ತೀರ್ಮಾನ ಹೇಳಿ’  ಎಂದು ಮಂಡಳಿಯ ಸಿಇಒ ಮೈಕಲ್‌ ಮ್ಯೂರ್‌ ಹೆಡ್‌  ಹೇಳಿದ್ದಾರೆ.

ಟೂರ್ನಿ ಆಡಲು ಭಾರತಕ್ಕೆ ತೆರಳುವ ಮೊದಲು ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಬೇಕು. ಭಾನುವಾರದ ಒಳಗೆ ಆಟಗಾರರು ತಮ್ಮ ನಿರ್ಧಾರ ತಿಳಿಸಬೇಕು ಎಂದೂ ಅವರು ಗಡುವು ನೀಡಿದ್ದಾರೆ.

‘ಮಂಡಳಿಯ ತೀರ್ಮಾನವನ್ನು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಬದಲು ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡ ಬೇಕಾಗುತ್ತದೆ’ ಎನ್ನುವ ಎಚ್ಚರಿಕೆಯನ್ನು ಅವರು ಕೊಟ್ಟಿದ್ದಾರೆ. ಇದಕ್ಕೆ ಆಟ ಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. 

‘ಮಂಡಳಿಯ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ದೇಶಕ್ಕಾಗಿ ಆಡುತ್ತೇವೆ. ವಿಂಡೀಸ್ ತಂಡವನ್ನೇ ಪ್ರತಿನಿಧಿಸುತ್ತೇವೆ. ಆದರೆ ಗುತ್ತಿಗೆ ಒಪ್ಪಂದವನ್ನು ಒಪ್ಪಿಕೊಳ್ಳಲು ಆಗುವುದಿಲ್ಲ’ ಎಂದು ವಿಂಡೀಸ್ ಟ್ವೆಂಟಿ–20 ತಂಡದ ನಾಯಕ ಡರೆನ್‌ ಸಮಿ ಮಂಡಳಿಗೆ ಪತ್ರವನ್ನೂ ಬರೆದಿದ್ದಾರೆ.

ವಿಂಡೀಸ್ ತಂಡ ಭಾರತದ ಎದುರು ಸರಣಿ ಆಡಲು ಬಂದಾಗಲೂ ಇದೇ ರೀತಿಯ ಬಿಕ್ಕಟ್ಟು ಎದುರಾಗಿತ್ತು. ಆದ್ದರಿಂದ ಕೆರಿಬಿಯನ್‌ ನಾಡಿನ ತಂಡದವರು ಅರ್ಧದಲ್ಲಿ  ಸರಣಿ ತೊರೆದು ಹೋಗಿದ್ದರು.

2012ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ವಿಶ್ವ ಚುಟುಕು ಟೂರ್ನಿಯಲ್ಲಿ ವಿಂಡೀಸ್ ಚಾಂಪಿಯನ್ ಆಗಿತ್ತು. ಟ್ವೆಂಟಿ–20 ಮಾದರಿಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ಈ ತಂಡ ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.