ADVERTISEMENT

ವಿಶ್ವ ಬಾಕ್ಸಿಂಗ್‌ಗೆ ವಿಕಾಸ್ ಸಿದ್ಧತೆ

ಪಿಟಿಐ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST

ನವದೆಹಲಿ (ಪಿಟಿಐ): ರಿಯೊ ಒಲಿಂಪಿಕ್ಸ್‌ನ  ಬಾಕ್ಸಿಂಗ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದ  ಭಾರತದ ವಿಕಾಸ್ ಕೃಷ್ಣನ್ ಅವರು  ಮುಂದಿನ ವರ್ಷ ನಡೆಯುವ ವಿಶ್ವ ಚಾಂಪಿಯನ್‌ ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ.

ಸೋಮವಾರ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, ‘ಒಲಿಂಪಿಕ್ಸ್‌ ನನಗೆ ಒಳ್ಳೆಯ ಅನುಭವ ನೀಡಿತು.  ಸಂಪೂರ್ಣ ಸಾಮರ್ಥ್ಯದಿಂದ ಹೋರಾ ಡಿದ್ದು ತೃಪ್ತಿ ತಂದಿದೆ. ಆದರೆ ಪದಕ ಗೆಲ್ಲದಿರುವುದು ಬೇಸರ ಮೂಡಿಸಿತು.  ಸೋಲಿನ ಸಂಪೂರ್ಣ ಹೊಣೆಯೂ ನನ್ನ ದೇ.  ಕ್ವಾರ್ಟರ್‌ಫೈನಲ್‌ನಲ್ಲಿ  ಸಂಪೂರ್ಣ ಸಾಮರ್ಥ್ಯವನ್ನು ವಿನಿಯೋಗಿಸುವಲ್ಲಿ ವಿಫಲನಾದೆ’ ಎಂದು  ಹೇಳಿದ್ದಾರೆ.

ಅವರು ಒಲಿಂಪಿಕ್ಸ್‌ನಲ್ಲಿ 75 ಕೆಜಿ ಯೊಳಗಿನವರ ವಿಭಾಗದಲ್ಲಿ ಸ್ಪರ್ಧಿಸಿ ದ್ದರು. 2011ರಲ್ಲಿ ಅವರು ವಿಶ್ವಚಾಂಪಿ ಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದರು. 
‘ನಾನು ಒಲಿಂಪಿಕ್ಸ್‌ನಲ್ಲಿ ಸೋತಿ ರುವುದಕ್ಕೂ ಫೆಡರೇಷನ್ ವಿವಾದಕ್ಕೂ ಯಾವುದೇ ರೀತಿಯ  ಸಂಬಂಧವಿಲ್ಲ. 

ಒಂದು ಸುವ್ಯವಸ್ಥಿತ ಸಂಸ್ಥೆ ಇಲ್ಲದೇ ಕ್ರೀಡೆಯ ಬೆಳವಣಿಗೆ ಹೇಗೆ ಸಾಧ್ಯ.  ವಿದೇಶದಲ್ಲಿ ಅಷ್ಟೇ ಅಲ್ಲ. ಸ್ವದೇಶ ದಲ್ಲಿಯೂ ಹೆಚ್ಚು ಸ್ಪರ್ಧೆಗಳು ನಡೆಯ ಬೇಕು. ಅದರಿಂದ ಇಲ್ಲಿಯ ಪ್ರತಿಭೆಗಳಿಗೆ ಅನುಕೂಲವಾಗುತ್ತದೆ. ಅದನ್ನು ಫೆಡರೇಷನ್ ಮಾತ್ರ ಮಾಡಲು ಸಾಧ್ಯ’ ಎಂದು ವಿಕಾಸ್ ಹೇಳಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ  ಪದಕ ಗೆಲ್ಲಬೇಕಾದರೆ  ನಾಲ್ಕು ವರ್ಷಗಳ ಮೊದಲೇ ಸಿದ್ಧತೆ ಆರಂಭವಾಗಬೇಕು. ರಿಯೊ ಒಲಿಂಪಿಕ್ಸ್ ಈಗ ಮುಗಿದ ಕಥೆ.  ಮುಂದಿನ ಒಲಿಂಪಿಕ್ಸ್‌ಗೆ ತಯಾರಿ ಆರಂಭವಾಗಬೇಕು. ದೇಶದಲ್ಲಿ ಬಾಕ್ಸಿಂಗ್ ಕೋಚ್‌ಗಳ ಕೊರತೆ ಇದೆ. ಅದನ್ನು ನಿವಾರಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.