ADVERTISEMENT

ವೇವ್‌ರೈಡರ್ಸ್‌ ತಂಡಕ್ಕೆ ರೂಪಿಂದರ್ ಸಾರಥ್ಯ

ಪಿಟಿಐ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ವೇವ್‌ರೈಡರ್ಸ್‌ ತಂಡಕ್ಕೆ  ರೂಪಿಂದರ್ ಸಾರಥ್ಯ
ವೇವ್‌ರೈಡರ್ಸ್‌ ತಂಡಕ್ಕೆ ರೂಪಿಂದರ್ ಸಾರಥ್ಯ   

ನವದೆಹಲಿ : ಶನಿವಾರ ಆರಂಭವಾಗಲಿರುವ ಹಾಕಿ ಇಂಡಿಯಾ ಲೀಗ್‌ (ಎಚ್‌ಐಎಲ್‌) ಐದನೇ ಆವೃತ್ತಿಗೆ ಡ್ರ್ಯಾಗ್‌ಫ್ಲಿಕ್‌ ಪರಿಣಿತ ರೂಪಿಂದರ್ ಪಾಲ್‌ ಸಿಂಗ್ ಅವರು ಡೆಲ್ಲಿ ವೇವ್‌ರೈಡರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ನ್ಯೂಜಿಲೆಂಡ್‌ನ ಸಿಮೊನ್‌ ಚಿಲ್ಡ್‌ ಅವರನ್ನು ಫ್ರಾಂಚೈಸ್‌ ಉಪನಾಯಕರನ್ನಾಗಿ ನೇಮಿಸಿದೆ.

2014ರ ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿ ರೂಪಿಂದರ್ ಇದ್ದರು. ಹೊಸ ಪ್ರತಿಭೆಗಳಾದ ದಕ್ಷಿಣ ಆಫ್ರಿಕಾದ ಅಸ್ಟಿನ್‌ ಸ್ಮಿತ್‌, ಅರ್ಜೆಂಟೀನಾದ ಮ್ಯಾನುವೆಲ್‌ ಬ್ರೂನೆಟ್‌, ಬೆಲ್ಜಿಯಂನ ವಿನ್ಸೆಂಟ್, ಭಾರತದ ಗೋಲ್‌ಕೀಪರ್‌ ವಿಕಾಸ್‌ ದಹಿಯಾ, ಮನದೀಪ್‌ ಅಂಟಿಲ್‌ ಮತ್ತು ಪ್ರದೀಪ್‌ ಸಿಂಗ್ ಅವರನ್ನು ಒಳಗೊಂಡ ತಂಡವನ್ನು ರೂಪಿಂದರ್‌ ಮುನ್ನಡೆಸಲಿದ್ದಾರೆ.

‘ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಠಿಣ ಅಭ್ಯಾಸ ನಡೆಸುತ್ತಿದ್ದೇವೆ. ತಂಡವು ಸಮತೋಲನದಿಂದ ಕೂಡಿದೆ. ಹಿಂದಿನ ಆವೃತ್ತಿಗಳಿಗಿಂತಲೂ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತೇವೆ’ ಎಂದು ರೂಪಿಂದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡೆಲ್ಲಿ ತಂಡ 2013ರ ಆವೃತ್ತಿಯಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆದಿತ್ತು. ಅದರ ನಂತರದ ವರ್ಷವೇ ಚಾಂಪಿಯನ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.