ADVERTISEMENT

ಸಚಿನ್‌ ತೆಂಡೂಲ್ಕರ್‌ ಮಾತೇ ಸ್ಫೂರ್ತಿ: ಸುಚಿತ್‌

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಮೈಸೂರು: ‘ಚಾಂಪಿಯನ್‌ ಆದ ತಂಡದಲ್ಲಿದ್ದೆ ಎನ್ನುವುದಕ್ಕಿಂತ ದಿಗ್ಗಜ ಕ್ರಿಕೆಟಿಗರಾದ ಸಚಿನ್‌, ಪಾಂಟಿಂಗ್‌, ಕುಂಬ್ಳೆ ಅವರ ಒಡನಾಟ. ಅವರ ಮಾತುಗಳು, ಅವರು ನೀಡಿದ ಪ್ರೋತ್ಸಾಹ ನನ್ನ ಕ್ರಿಕೆಟ್‌ ಜೀವನಕ್ಕೆ ಲಭಿಸಿದ ಮಹತ್ವದ ತಿರುವು ಎಂದು ಭಾವಿಸಿದ್ದೇನೆ’
–ಈ ರೀತಿ ಹೇಳಿ ಖುಷಿಯಿಂದ ಬೀಗಿದ್ದು ಮೈಸೂರಿನ ಕ್ರಿಕೆಟಿಗ ಜೆ. ಸುಚಿತ್‌. ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಮುಂಬೈ ಇಂಡಿಯನ್ಸ್‌ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ.

‘ಸಚಿನ್‌, ಪಾಂಟಿಂಗ್‌ ಅವರನ್ನು ಟಿ.ವಿಯಲ್ಲಿ ನೋಡಿ ಆನಂದಿಸಿದವನು ನಾನು. ಆದರೆ, ಅವರೊಂದಿಗೆ ಮಾತನಾಡಲು, ಅಭ್ಯಾಸ ನಡೆಸಲು ಅವಕಾಶ ಸಿಕ್ಕಿದ್ದು ಎಂದಿಗೂ ಮರೆಯಲಾಗದ ಕ್ಷಣ. ಇಂಥ ಅವಕಾಶ ಎಷ್ಟು ಮಂದಿ ಆಟಗಾರರಿಗೆ ಸಿಗುತ್ತೆ ಹೇಳಿ?’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಸುಚಿತ್‌ ಇನ್ನೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ. 21 ವರ್ಷ ವಯಸ್ಸಿನ ಅವರು ಐಪಿಎಲ್‌ನಲ್ಲಿ 13 ಪಂದ್ಯ ಆಡಿ 10 ವಿಕೆಟ್‌ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.