ADVERTISEMENT

ಸಭೆಯಿಂದ ಹೊರಗುಳಿದ ರಾಹುಲ್ ಜೊಹ್ರಿ

ಬಿಸಿಸಿಐ ವಿಶೇಷ ಸಾಮಾನ್ಯ ಸಭೆ

ಪಿಟಿಐ
Published 26 ಜುಲೈ 2017, 19:32 IST
Last Updated 26 ಜುಲೈ 2017, 19:32 IST
ಸಭೆಯಿಂದ ಹೊರಗುಳಿದ ರಾಹುಲ್ ಜೊಹ್ರಿ
ಸಭೆಯಿಂದ ಹೊರಗುಳಿದ ರಾಹುಲ್ ಜೊಹ್ರಿ   

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಹುಲ್ ಜೊಹ್ರಿ ಅವರಿಗೆ ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಅವಕಾಶ ನೀಡಲಿಲ್ಲ.

ಸಭೆಯಲ್ಲಿ ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಪದಾಧಿಕಾರಿಗಳು ಮಾತ್ರ ಹಾಜರಿರಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರಿಂದ ಸಿಇಒಗೆ ಅವಕಾಶ ನೀಡಿರಲಿಲ್ಲ.

ಪಂಜಾಬ್ ಮತ್ತು ಒಡಿಶಾ ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳು ತಾವು ಪ್ರತಿನಿಧಿಸುವ ಸಂಸ್ಥೆಗಳ ಪದಾಧಿಕಾರಿಗಳಾಗಿರಲಿಲ್ಲ. ಆದ್ದರಿಂದ ಅವರಿಗೂ ಸಭೆಯಲ್ಲಿ ಭಾಗವಹಿಸುವ ಅವಕಾಶ ನೀಡಿರಲಿಲ್ಲ.‌

ADVERTISEMENT

‘ಜೊಹ್ಲಿ ಅವರು ಬಿಸಿಸಿಐ ಪದಾಧಿಕಾರಿಯಲ್ಲ. ಅವರು ಮಂಡಳಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಯಾಗಿದ್ದಾರೆ. ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನವನ್ನು ನಾವು ಪಾಲಿಸಿದ್ದೇವೆ. ಸಭೆಗೆ ಬಂದಿದ್ದ ಪದಾಧಿಕಾರಿಗಳಲ್ಲದ ನೌಕರರಿಗೆ ಹೊರನಡೆಯುವಂತೆ ಹಂಗಾಮಿ ಕಾರ್ಯದರ್ಶಿ ತಿಳಿಸಿದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.