ADVERTISEMENT

ಸ್ಕ್ವಾಷ್: ಘೋಷಾಲ್‌ಗೆ ಸೋಲು

ಪಿಟಿಐ
Published 22 ಅಕ್ಟೋಬರ್ 2017, 19:07 IST
Last Updated 22 ಅಕ್ಟೋಬರ್ 2017, 19:07 IST

ಸುರೆ: ಭಾರತದ ಅಗ್ರಗಣ್ಯ ಆಟಗಾರ ಸೌರವ್ ಘೋಷಾಲ್‌ ಇಲ್ಲಿ ನಡೆದ ಪಿಎಎಸ್‌ಎ ಚಾನೆಲ್‌ ವಿಎಎಸ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಸೋಲು ಕಂಡಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ 11–13, 8–11, 9–11ರಲ್ಲಿ ಅಗ್ರಗಣ್ಯ ಆಟಗಾರ ಈಜಿಪ್ಟ್‌ನ ಮೊಹಮ್ಮದ್ ಎಲ್‌ಶೊರ್‌ಬರ್ಗಿ ಎದುರು ಪರಾಭವಗೊಂಡರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದ ಎಲ್‌ಶೊರ್‌ಬರ್ಗಿ ಎದುರು ಘೋಷಾಲ್ ಪಾಯಿಂಟ್ಸ್‌ ಕಲೆಹಾಕಲು ಪ್ರಯಾಸ ಪಟ್ಟರು.

ಮೊದಲ ಗೇಮ್‌ನಲ್ಲಿ ಪೈಪೋಟಿ ನೀಡಿದ ಭಾರತದ ಆಟಗಾರ ಬಳಿಕ ಮಂಕಾದರು. ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ದೀಪಿಕಾ ಪಳ್ಳಿಕಲ್ ಹಾಗೂ ಜೋಷ್ನಾ ಚಿಣ್ಣಪ್ಪ ಮೊದಲ ಸುತ್ತಿನಲ್ಲಿಯೇ ಸೋತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.