ADVERTISEMENT

‍ಹರ್ಮನ್‌ ಪ್ರೀತ್‌ ಕೌರ್‌ ಭರ್ಜರಿ ಶತಕ: ಆಸ್ಟ್ರೇಲಿಯಾಗೆ 282 ರನ್‌ ಟಾರ್ಗೆಟ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 16:01 IST
Last Updated 20 ಜುಲೈ 2017, 16:01 IST
ಹರ್ಮನ್‌ ಪ್ರೀತ್‌ ಕೌರ್‌
ಹರ್ಮನ್‌ ಪ್ರೀತ್‌ ಕೌರ್‌   

ಡರ್ಬಿ, ಲಂಡನ್‌: ಇಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿತ್ತು. 

ಮೆಗ್‌ಲ್ಯಾನಿಂಗ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಈ ಬಾರಿಯ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿ ಈ ಕ್ರೀಡಾಂಗಣದಲ್ಲಿ ಕಣಕ್ಕಿಳಿದಿದೆ. ಭಾರತದ ಪಾಲಿಗೆ ಅದೃಷ್ಟದ ಅಂಗಳ ಎನಿಸಿರುವ ಇಲ್ಲಿ ಮಿಥಾಲಿ ರಾಜ್‌ ಬಳಗ ಗುಂಪು ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿಯೂ ಜಯಗಳಿಸಿದೆ.

ಒಟ್ಟು ಆರು ಬಾರಿ ವಿಶ್ವಕಪ್‌ ಗೆದ್ದಿರುವ ಆಸ್ಟ್ರೇಲಿಯಾ ಮತ್ತೊಮ್ಮೆ ಫೈನಲ್‌ ಪ್ರವೇಶಿಸುವ ಉಮೇದಿನಲ್ಲಿದೆ. ಭಾರತ ಸ್ಥಿತಿ ಭಿನ್ನವಾಗಿದ್ದು, ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.

ADVERTISEMENT

ಈ ಪಂದ್ಯದಲ್ಲಿ ಗೆಲ್ಲುವ ತಂಡ ಜುಲೈ 23ರಂದು ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ, ಈಗಾಗಲೇ ಅಂತಿಮ ಹಂತ ತಲುಪಿರುವ ಇಂಗ್ಲೆಡ್‌ ಎದುರು ಪ್ರಶಸ್ತಿಗಾಗಿ ಸೆಣಸಲಿದೆ.

ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಪಂದ್ಯವನ್ನು ನಿಗದಿತ 50 ಓವರ್‌ಗಳ ಬದಲು 42 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.

ಭಾರತ 42 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 281 ರನ್‌ ಗಳಿಸಿದೆ(ಸ್ಮೃತಿ ಮಂದಾನ 06, ಪೂನಮ್‌ ರಾವುತ್‌ 14, ಮಿಥಾಲಿ ರಾಜ್‌ 36, ದೀಪ್ತಿ ಶರ್ಮಾ 25, ‍ಹರ್ಮನ್‌ ಪ್ರೀತ್‌ ಕೌರ್‌ ಬ್ಯಾಟಿಂಗ್‌ 171, ವೇದ ಕೃಷ್ಣಮೂರ್ತಿ ಬ್ಯಾಟಿಂಗ್‌ 16)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.